ಅನುದಿನ ಕವನ-೬೬೨, ಕವಯತ್ರಿ:ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ ಕವನದ ಶೀರ್ಷಿಕೆ: ದೀಪಾವಳಿ ಹಣತೆ (ಗಜಲ್), ರಾಗ ಸಂಯೋಜನೆ-ಗಾಯನ: ಶಾರದ ಕೊಪ್ಪಳ, ಹಗರಿಬೊಮ್ಮನಹಳ್ಳಿ

ದೀಪಾವಳಿ ಹಣತೆ (ಗಝಲ್)

ತಮವ ಸರಿಸಿ ಬೆಳಕಿನೆಡೆಗೆ ಸನ್ಮಾರ್ಗದಲ್ಲಿ ನಡೆಯುತ
ಭಕ್ತಿಯಿಂದ ಬೆಳಗಿಸೋಣ ದೀಪಾವಳಿಯ ಹಣತೆ //

ಮನದ ದುಗುಡ ದುಮ್ಮಾನ, ವೈಮನಸುಗಳನೆಲ್ಲವ ಕಿತ್ತೊಗೆದು
ಸಂತಸ – ಸಂಭ್ರಮದಿಂದ ಬೆಳಗಿಸೋಣ ದೀಪಾವಳಿಯ ಹಣತೆ //

ದ್ವೇಷ – ಅಸೂಯೆ, ದುಷ್ಟತನವನ್ನೆಲ್ಲ ಮರೆತು
ಪ್ರೀತಿ – ಪ್ರೇಮದೊಳು ಬೆರೆತು ಬೆಳಗಿಸೋಣ ದೀಪಾವಳಿಯ ಹಣತೆ //

ಹಿಂದು, ಮುಸ್ಲಿಂ, ಕ್ರೈಸ್ತರೆಲ್ಲ ಬೇರೆ ಎಂದು ತಿಳಿಯದೇ
ಎಲ್ಲ ಜಾತಿಗಳೊಂದೇ ಎಂದು ಸಾರುತ ಬೆಳಗಿಸೋಣ ದೀಪಾವಳಿಯ ಹಣತೆ //

ಬಂಧ – ಸಂಬಂಧಗಳೆಲ್ಲವ ಒಗ್ಗೂಡಿಸಿ ದುಗುಡ – ದುಮ್ಮಾನಗಳ ದೂಡಿ
ಅರಿತು – ಬೆರೆತು ಸದ್ಗುಣಗಳಿಂದ ಬೆಳಗಿಸೋಣ ದೀಪಾವಳಿಯ ಹಣತೆ //

ಸತಿ – ಪತಿಗಳಿಬ್ಬರೂ ಸಮಾನತೆಯಿಂದ ಬದುಕಿನ ಬಂಡಿಯನೆಳೆಯುತ
ಬಾಂಧವ್ಯವ ತೊರೆಯದೇ ಬೆಳಗಿಸೋಣ ದೀಪಾವಳಿಯ ಹಣತೆ //


-ಶೋಭಾ ಮಲ್ಕಿ ಒಡೆಯರ್🖋
ಹೂವಿನ ಹಡಗಲಿ

*****