✍️ಹಾಯ್ಕುಗಳು✍️
ನಿನ್ನ ನೆನಪು
ನವನವೀನ, ಅದೇ
ನಿತ್ಯ ತಪಸ್ಸು…
ಅಂಗಳ ಚೆಲ್ವಿ
ಕದ್ದಿಲೆ ಕೇಳಿದಳು,
ಅವನು ಎಲ್ಲಿ…
ಮುಂಗುರುಳಿನ
ಸೋಗಿನಲ್ಲಿ ನಿನ್ನನ್ನು
ಮರೆತು ಬಿಟ್ಟೆ…..
ನೀನು ಅದೆಷ್ಟು
ದೂರ ಹೋದರೂ,ನಾನು
ನೆರಳಿನಂತೆ ….
ನಗುತ್ತಾ ಬಂದ
ಚಂದಿರಗೆ ನಿರಾಸೆ,
ಅವಳಿಲ್ಲೆಂದು….
ಅವಳಿಗೇನೂ
ಬೇಕಿರಲಿಲ್ಲ, ನಿನ್ನ
ನಗುವ ಬಿಟ್ಟು….
ಊಟೋಪಚಾರ
ಮಾತಿನ ಭಾಗ, ನೀನು
ಎದೆ ವಿಚಾರ….
ಮರೆತವಗೆ
ಮತ್ತೆ ಹೇಳಲಾರೆ,ನೀ
ನನ್ನವನೆಂದು….
ಈ ನೆರಳಿಗೆ
ಎಂದೂ ಬೇಸರವಿಲ್ಲ,
ತಾನು ಕಪ್ಪೆಂದು…
-ದಾಕ್ಷಾಯಣಿ ಶಂಕರ, ಮಹಾಲಿಂಗಪುರ
*****