ಅನುದಿನ ಕವನ-೬೭೯, ಕವಿ:ಲೋಕೇಶ್ ಮನ್ವಿತಾ, ಬೆಂಗಳೂರು

ಯಾಕೋ ನಾನು
ಇಂದು ಮೌನಿ
ಹೃದಯದಲ್ಲಿ

ಏತಕೋ
ಮಾತಿಗೆ ಬರ
ನಿರ್ಲಿಪ್ತ
ಭಾವವೊಂದು
ಸುಮ್ಮನೆ
ಬೆರಳ ತುದಿಯಲ್ಲಿ
ಕುಳಿತು
ಮರಳು ಕೆದಕುತ್ತಿದೆ

ಅಲೆಗಳಿನ್ನು
ಪಾದ ಸೋಕಿಲ್ಲ
ಕಾಣದಿರುವ
ಚಂದಿರಗೆ
ನಿರೀಕ್ಷೆ

ಹೆಜ್ಜೆ ಗುರುತು
ಯಾರದ್ದೋ
ಎದೆಯ
ತಳ ಊರಿದೆ
ಕಾದು ಕೂತಿರುವವನ
ನೆಲವೀಗ
ಬರಡು ಬರಗಾಲ

ನಿನ್ನದಾಗಿರದ
ನೋವು
ನನಗಷ್ಟೇ ತಿಳಿದಿದೆ
ನಗುವನ್ನಷ್ಟೇ
ನಗಿಸುವ
ಹೂ ಸದಾ
ಅರಳುತ್ತಲೇ ಇದೆ.

ಹೊರಟು ಬಿಡುವೆ
ಬದುಕುವ ಆಸೆ
ದೀಪವನ್ನು
ಹಚ್ಚಬೇಕಿದೆ
ಇರುಳು ನನಗೆ
ನಿನ್ನ ಮುಖವನ್ನಷ್ಟೇ
ಕಾಣಿಸುತ್ತದೆ

-ಲೋಕೇಶ್ ಮನ್ವಿತಾ, ಬೆಂಗಳೂರು
*****