ಅನುದಿನ ಕವನ-೬೮೧, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ: ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ

ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ

ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ,
ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ.

ಬನ್ನಿ ಗೊಂಬೆಗಳೆ ಆಟ ಆಡುಮಾ,
ಹಟ್ಟಿಲಿ ಹಿಟ್ಟಿಲ್ಲ ಗಂಜಿಯಿಲ್ಲ,
ಬನ್ನಿ ಗೊಂಬೆಗಳೆ ನಿಮ್ಮ ನೋಡ್ತಾ ಕುಂತಕಮಾ.

ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ,
ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ.

ಬನ್ನಿ ಗೊಂಬೆಗಳೆ ನಾಮ್ ದೊಡ್ಡೊರೊ,
ನೀಮ್ ದೊಡ್ಡೊರೊ ಲೆಕ್ಕ ಹಾಕ್ಕಂಡು ನಿಂತ್ಕಮಾ.

ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ,
ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ.

ಓದುಕೆ ಮಟ್ಟಗೆ ಇಸ್ಕೂಲಿಲ್ಲ ಸ್ಲೇಟು,
ಬಳಪಯಿಲ್ಲ ಅಂಡಿನ ಮ್ಯಾಲೆ ಬಟ್ಟೆಯಿಲ್ಲ,
ಬನ್ನಿಗೊಂಬೆಗಳೆ ನಿಮ್ಮ ಕಾಣ್ಕ ಕಾಣ್ಕ ಸ್ವರ್ಗ ಏರುಮಾ.

ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ,
ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ,

ನಮ್ಗೂ ಗೇಮೆಯಿಲ್ಲ ಗೆತ್ತಿಲ್ಲ ಗತ್ತಿಲ್ಲ,
ನೀಮು ನಿಂತ ಗತ್ತಾ ಕಾಣುಮಾ,
ಬನ್ನಿ ಗೊಂಬೆಗಳೆ ನಿಮ್ ಬಿಟ್ರೆ ನಮ್ಗೆ ಗತಿಯಿಲ್ಲ.

ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ,
ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ.

ನಿಮ್ಮ ಅಂದ ನೋಡ್ಕಂದು ಹಲ್ಬುಡ್ತಿಮಿ,
ನಿಮ್ಮ ಚಂದ ನೋಡ್ಕಂದು ಹಸ್ಕಮನಿಕತಿಮಿ,
ಬನ್ನಿ ಗೊಂಬೆಗಳೆ ನಿಮ್ಮ ಹೆಸ್ರೆಳ್ಕಂಡಮಾ
ಕೆಚ್ಚಾಡ್ಕಂಡು ಹಿಟ್ಟಾಡ್ಕಂಡು ಬಾಳುಗೇಮೆ ಮರಿತಿಮಿ.

ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ,
ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ.

ಹಿಟ್ಟಾಕುಕ್ಕಾಗದ ಅವ್ವಧಿರ,
ಓದ್ಸಿ ಬರ್ಸಿ ಬೆಳ್ಸುಕ್ಕಾಗದ ಅಪ್ಪದಿರ,
ನಂಬ್ಕಂಡು ಅವರ್ರು ತೋರ್ಸೊ ಗೊಂಬೆಗಳ ಕೂರ್ಸ್ಕ ಕಾಲಕಳಿತಿಮಿ.

ಬನ್ನಿಗೊಂಬೆಗಳೆ ಬನ್ನಿಗೊಂಬೆಗಳೆ,
ಬನ್ನಿಗೊಂಬೆಗಳೆ ಬನ್ನಿಗೊಂಬೆಗಳೆ.

ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ,
ಹಟ್ಟಿಲಿ ಕಾಸಿಲ್ಲ ಕರಿಮಣಿಯಿಲ್ಲ.


– ಮನಂ, ಬೆಂಗಳೂರು
*****