ನವದೆಹಲಿ, ನ.18: ಬಳ್ಳಾರಿಯ ಹಿರಿಯ ಕವಯಿತ್ರಿ ಎನ್.ಡಿ ವೆಂಕಮ್ಮ ಅವರಿಗೆ ಬಹುಜನ ಸಾಹಿತ್ಯ ಅಕಾಡೆಮಿ (ಬಿ.ಎಸ್.ಎ) ವಿಶ್ವಗುರು ಬಸವಣ್ಣ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿತು.
ಈಚೆಗೆ ನಗರದ ಕರೋಲ್ ಬಾಗ್ ನ ಗರಹವಾಲ ಭವನದಲ್ಲಿ ಜರುಗಿದ ಬಹುಜನ ಬರಹಗಾರರ 3ನೇ ಸಮ್ಮೇಳನದಲ್ಲಿ ಅಕಾಡೆಮಿಯ ರಾಷ್ಟ್ರೀಯ ಅಧ್ಯಕ್ಷ ನಲ್ಲ ರಾಧಾಕೃಷ್ಣ ಅವರು ವೆಂಕಮ್ಮಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸೋಮನಾಥ, ರಾಷ್ಟ್ರೀಯ ಕಾರ್ಯದರ್ಶಿ ಸೀತಾ ಮಹಾಲಕ್ಷ್ಮಿ, ಹಂಪಿ ಕನ್ನಡ ವಿವಿ ಉಪ ಕುಲಸಚಿವ ಡಾ. ಎ ವೆಂಕಟೇಶ ಮತ್ತಿತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮೂರು ತಿಂಗಳ ಹಿಂದೆ ಕರ್ನಾಟಕ ಸರಕಾರದ ರಾಜ್ಯಮಟ್ಟದ ಡಾ.ಬಾಬು ಜಗಜೀವನರಾಮ್ ಪ್ರಶಸ್ತಿಯನ್ನು ಎನ್.ಡಿ. ವೆಂಕಮ್ಮ ಅವರು ಸ್ವೀಕರಿಸಿದ್ದರು.
ಅಭಿನಂದನೆ: ಬಹುಜನ ಸಾಹಿತ್ಯ ಅಕಾಡೆಮಿಯ ವಿಶ್ವಗುರು ಬಸವಣ್ಣ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿರುವ ಎನ್ ಡಿ ವೆಂಕಮ್ಮ ಅವರನ್ನು ಬಳ್ಳಾರಿಯ ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ, ಹಿರಿಯ ಕವಿ ಟಿ.ಕೆ ಗಂಗಾಧರ ಪತ್ತಾರ್, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಸಿ.ಮಂಜುನಾಥ್, ಹಿರಿಯ ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್ ಮತ್ತಿತರರು ಅಭಿನಂದಿಸಿದ್ದಾರೆ.
*****