ನೆರಳು
ಬಹುವಾಗಿ ಕಾಡಿದ ನೆರಳು
ಬೆಂಬತ್ತಿದೆ ;ಜಾಡಿಸಲೆತ್ನಿಸಿದೆ
ಅಡ್ರಗಾಲ್ಹಾಕಿ ಅಡ್ಡ ನಿಂತಿದೆ
ಅಂಟ್ರಕ್ಕಿಪಿಳ್ಳಿಯಾದ ಈ ನೆರಳು
ಸದಾ ಕಣ್ ಪಿಳಕಿಸಿ ಅಣುಕಿಸುತಿದೆ
ʼ ನನ್ನಿಂದ ಹೊರ ಹೋಗು ನೋಡು ಮತ್ತೆ ʼ
ಸವಾಲೆಸೆದು ಸಂಗ್ರಾಮಕ್ಕೆ ನಿಂತಿದೆ
ಬೇಡವೆಂದು ದೂರ ನಿಂತರೂ
ನೆನಪಾಗಿ ಕಾಡುತಿದೆ
ಉಂಡ,ಕುಡಿದ, ನೆನಪು ಹಂಚಿಕೊಂಡ ನೆರಳು
ರಹಸ್ಯಗಳನ್ನು ಹುದುಗಿಸಿಕೊಂಡಿದೆ.
ಕತ್ತಿ ಮಸೆದು ;ವಿನಾಕಾರಣ
ಜಗಳ ಕಾಯಲೆಂದು ಕಾದು ನಿಂತಿದೆ.
ನನ್ನೊಂದಿಗೆ ಸದಾ ಓಡುತ್ತಿದ್ದ
ನೆರಳನ್ನು ಒಮ್ಮೆ ಕೇಳಲೆತ್ನಿಸಿದೆ
ಹೇಳದೆ ಹೋಗು ;ಕಾರಣ ಬೇಡವೆಂದೆ
ಬಿಟ್ಟೇನಂದ್ರೂ ಬಿಡನಯ್ಯ
ನಿನ್ನ ತೋಳ್ತೆಕ್ಕೆಯೇ ಆಸರೆ ಎಂದಿದೆ.
ಚಿತ್ರ &ಕವನ: ಶಿಶಬ (ಶಿವಶಂಕರ ಬಣಗಾರ),
ಹೊಸಪೇಟೆ
*****