ಬದುಕೇ ಹಬ್ಬ,
ಬಾಳೇ ಹಬ್ಬ.
ಮಟ್ಟಗೆ ಮರ್ಯಾದೆಯಾಗಿ ಬದುಕೊದು ಹಬ್ಬ,
ಹಬ್ಬ ಬರೋದನ್ನ ಕಾಯೋದು ಹಬ್ಬ ಅಲ್ಲ,
ಹಬ್ಬ ಬಂದಾಗ ಹಬ್ಬ ಮಾಡಿ ಹಬ್ಬ ಮರೆಯೊದಲ್ಲ.
ಬದುಕೇ ಹಬ್ಬ,
ಬಾಳೇ ಹಬ್ಬ.
ಕುಣಿದು ಕುಪ್ಪಳಿಸೊದಷ್ಟೆ ಹಬ್ಬ ಅಲ್ಲ,
ಬಾಡು ಗೀಡು ಮೇದು ತೇಗೊದಷ್ಟೆ ಹಬ್ಬ ಅಲ್ಲ,
ನಗತಾ ನಲಿತಾ ನಾಕ್ಜನವಾ ನಗ್ಸುದೂ ನಲಿಸುದೂ ಹಬ್ಬ.
ಬದುಕೇ ಹಬ್ಬ,
ಬಾಳೇ ಹಬ್ಬ.
ದುಡಿಯೊದು ದಣಿಯೊದು ಮಕ್ಕೊದೂ ಹಬ್ಬ,
ಓದೋದು ಬರೆಯೋದು ಮಾತಾಡುದೂ ಹಬ್ಬ,
ದೇಸಾ ದೇಸಾ ಸುತ್ತುದು ತಿರುಗುದೂ ಹಬ್ಬ.
ಬದುಕೇ ಹಬ್ಬ,
ಬಾಳೇ ಹಬ್ಬ.
ಬದುಕಾ ಬಾಳ್ಮೆನ ತಾಳ್ಮೆಲಿ ಕಳೆಯುದು ಹಬ್ಬ,
ಉಣ್ಣುದೇ ಹಬ್ಬ ಅಂತ ಹೊಟ್ಟೆಹುಣ್ಣು ಮಾಡ್ಕೊದು ಹಬ್ಬ ಅಲ್ಲ,
ಹೊಟ್ಟೆ ಹುಣ್ಣಾಗು ಮಟ್ಟಕ್ಕೆ ನಗ್ತಾ ನಗ್ತಾ ಬಾಳುದು ಹಬ್ಬ.
ಬದುಕೇ ಹಬ್ಬ,
ಬಾಳೇ ಹಬ್ಬ.
-ಮನಂ ಐಪಿಎಸ್, ಬೆಂಗಳೂರು
*****