ಅನುದಿನ ಕವನ-೭೦೨, ಕವಿ: ಮಹಿಮ, ಹಂದ್ಯಾಳ್, ಬಳ್ಳಾರಿ ಜಿ. ಕವನದ ಶೀರ್ಷಿಕೆ: ಮುಪ್ಪು

ಮುಪ್ಪು

ಸುಂದರಿಯ ವರಿಸಲು ಬಂದರು
ಸಾವಿರಾರು ರಾಜರುಗಳು
ಸಾಲು ಸಾಲಾಗಿ..

ಅವಳು ಯಾರನ್ನೂ ಒಪ್ಪಲಿಲ್ಲ..
ಹೇ ಕುರೂಪಿಗಳಾ ಅಂದುಬಿಟ್ಟಳು..

ಕೊನೆಗೆ ಓರ್ವ ರಾಜ ಬಂದವಳೆದುರು ನಿಂತ
ಸುಂದರಿ ಅವನ ನೋಡುತ್ತಲೇ ಬೆಚ್ಚಿ ಬೆದರಿ ದಿಕ್ಕೆಟ್ಟು ಓಡಿದಳು..

ರಾಜ ಬಿಡಲಿಲ್ಲ
ಹಿಂಬಾಲಿಸಿ ಅವಳ ಹಿಡಿದು
ಅವಳ ಆಕ್ರಮಿಸಿಯೇ ಬಿಟ್ಟ
ಆವರಿಸಿಯೇ ಬಿಟ್ಟ
ಅವಳು ಅಧೀರಳಾಗಿ ಅವನ ವರಿಸಿಯೇ ಬಿಟ್ಟಳು

ಆ ಧೀರ ರಾಜನ ಹೆಸರೇ ಮುಪ್ಪು..


-ಮಹಿಮ, ಹಂದ್ಯಾಳ್, ಬಳ್ಳಾರಿ ತಾ. ಜಿಲ್ಲೆ
*****

One thought on “ಅನುದಿನ ಕವನ-೭೦೨, ಕವಿ: ಮಹಿಮ, ಹಂದ್ಯಾಳ್, ಬಳ್ಳಾರಿ ಜಿ. ಕವನದ ಶೀರ್ಷಿಕೆ: ಮುಪ್ಪು

Comments are closed.