ಅನುದಿನ‌ ಕವನ-೭೧೮, ಕವಿ:ಲೋಕಿ (ಲೋಕೇಶ್ ಮನ್ವಿತಾ) ಬೆಂಗಳೂರು

ಬಿರುಕಿಗದೆಷ್ಟು
ಸಲೀಸು
ಬೇರ್ಪಡಿಸಲು

ಬೆರೆತಿದ್ದ ಭಾವವೂ
ಸಡಿಲಗೊಂಡು
ಅಂತರ ಕಾಯ್ದುಕೊಳ್ಳುವ
ಜವಬ್ದಾರಿಗೆ ಅಣೆ

ಸೋಲಲೇ ಬೇಕಾದ
ಸಲುವಾಗಿ ಗೆಲ್ಲುವ
ನಡೆಯೀಗ
ಬೆರಳು ಎಡವಿದೆ

ಹಠದ ಆರ್ಭಟಕ್ಕೆ
ಉಳಿದೆಲ್ಲವೂ ಗೌಣ
ಸಂತಸದ ಜಾಗಕೀಗ
ಸಂಕಟವೂ ಸೇರ್ಪಡೆ

ಚಡಿ ಏಟು ನಾಲ್ಕು
ಬಿದ್ದು ಬಿಡಲಿ
ಎದೆಯ ಚಡಿಪಡಿಕೆಗೆ
ನೋಯುವ ಬಿರುಬು
ತಡೆಯದು

ಸ್ವರದ ಮಾತುಗಳಿಗೀಗ
ಅಪಸ್ವರದ ಛಾಯೆ
ರಾಗ ಇನ್ನು ಕೂಡದು
ಆಲಾಪ ಇನ್ನು ವಿರಹವಷ್ಟೇ!


-ಲೋಕಿ (ಲೋಕೇಶ್ ಮನ್ವಿತಾ) ಬೆಂಗಳೂರು

(ಚಿತ್ರಕೃಪೆ: ಇಂಟರ್ ನೆಟ್)

*****