ಮೋರಿಗೇರಿಯಲ್ಲಿ ಜನಮನ ಸೆಳೆದ ‘ನಯನ‌’ ಸಂಗೀತ ಸಂಭ್ರಮ ಕಾರ್ಯಕ್ರಮ

ಹಗರಿಬೊಮ್ಮನಹಳ್ಳಿ : ಡಿ 25: ತಾಲೂಕಿನ ಮೋರಿಗೆರಿ ಗ್ರಾಮದಲ್ಲಿ ನಯನ ಸಂಗೀತ ಕಲಾ ಸಂಸ್ಥೆ (ರಿ ) ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಜರುಗಿದ ಸಂಗೀತ ಸಂಭ್ರಮ ಕಾರ್ಯಕ್ರಮ ಜನಮನ ಸೆಳೆಯಿತು. ಕಾರ್ಯಕ್ರಮದ ಉದ್ಘಾಟಿಸಿದ ಹಿರಿಯ ಕಲಾವಿದ ಎಲ್ ರಾಜೇಂದ್ರಪ್ಪ ಅವರು ಮಾತನಾಡಿ ದೈಹಿಕ ರೋಗಗಳು, ಮಾನಸಿಕ ಖಿನ್ನತೆಯನ್ನು ದೂರ ಮಾಡುವ ಶಕ್ತಿ ಸಂಗೀತಕ್ಕಿದೆ ಇದೆ ಎಂದು ಹೇಳಿದರು.


ರಕ್ತದೊತ್ತಡ, ಶುಗರ್ ಗಳಂತಹ ರೋಗಗಳು ದೂರವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಮೋರಿಗೇರಿ ಗ್ರಾಮ ಪಂಚಾಯತಿ ಸದಸ್ಯ ಕುಂಟೂರು ನಾಗರಾಜ್ ಮಾತನಾಡಿ ಇವತ್ತಿನ ಆಧುನಿಕ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಂಗೀತ ಕಾರ್ಯಕ್ರಮಗಳು ಜರುಗುವುದು ಅತೀ ವಿರಳ. ಆದರೆ ನಯನ ಸಂಗೀತ ಕಲಾ ಸಂಸ್ಥೆ ಯವರು ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಮಾದರಿಯಾಗಿದೆ ಎಂದರು.
ಟಿವಿ, ಮೊಬೈಲ್ ಗಳಿಂದ ವಿದ್ಯಾರ್ಥಿಗಳು ದೂರವಿದ್ದು ಲಲಿತ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಚಿಲಗೋಡು ಶೇಖರಪ್ಪ ಅವರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮತ್ತೋರ್ವ ಸದಸ್ಯ ಸಿ ಉದಯಕುಮಾರ್ ಮಾತನಾಡಿ ಯುವಕರಿಗೆ , ವಿದ್ಯಾರ್ಥಿಗಳಿಗೆ ಸಂಗೀತದ ಮಹತ್ವ ತಿಳಿಯಲು ಇಂತಹ ಕಾರ್ಯಕ್ರಮಗಳು ಅತ್ಯಗತ್ಯ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಡಿ ನೀಲಮ್ಮ ಹಾಗು ಸದಸ್ಯರುಗಳಾದ ಶ್ರೀಮತಿ ಗಿರಿಜಮ್ಮ, ಶ್ರೀದೀಪ, ವಿ ಎಸ್ ಎಸ್ ಎಸ್ ಎನ್ ಅಧ್ಯಕ್ಷ ಚಿಲಗೋಡು ಜಯಪ್ಪ, ಬಿಜೆಪಿ ಮುಖಂಡ ಜಿತೇಂದ್ರ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿಯ ಉಪಾಧ್ಯಕ್ಷ ಎ ಬಸವನಗೌಡ, ಮೋರಿಗೇರಿ ಪ್ರಾಥಮಿಕ ಶಾಲೆಯ ಎಸ್, ಡಿ,ಎಂ, ಸಿ ಅಧ್ಯಕ್ಷ ಕೆ ಕೀರ್ತನ, ಪ್ರೌಢ ಶಾಲೆಯ ಎಸ್, ಡಿ, ಎಂ, ಸಿ ಅಧ್ಯಕ್ಷ ಬಿ ಮಲ್ಲಪ್ಪ ಉಪಸ್ಥಿತರಿದ್ದರು, ವಿಶ್ವರಂಜನಿ ಸಂಗೀತ ಪಾಠಶಾಲೆಯ ಮಕ್ಕಳು ಪ್ರಾರ್ಥಿಸಿದರು. ಬಿ ವೀರೇಶ್ ಹಾರ್ಮೋನಿಯಂ, ಸಿ. ಕೊಟ್ರೇಶ್ ಮೋರಿಗೇರಿ ತಬಲ ಸಾಥ್ ನೀಡಿದರು.
*****