ಅನುದಿನ‌ ಕವನ-೭೨೬, ಯುವ ಕವಿ: ದಾದಾಪೀರ್ ಜೈಮನ್, ಹಗರಿಬೊಮ್ಮನಹಳ್ಳಿ

ನಿನ್ನ ಪ್ರೀತಿಸುವುದಿಲ್ಲ
ಮೋಹ ಮೊದಲಿಗೆ ಇಲ್ಲ
ಕೂಗಿ ಕರೆಯಲಾಗುವುದಿಲ್ಲ
ನಿನ್ನ ವೇಷ ತೊಡಲು ಕಷ್ಟವಾಗುತ್ತದೆ
ನಿನ್ನ ಸೇಡು ಸಾಮ್ರಾಜ್ಯಗಳನ್ನೇ ಮುಳುಗಿಸುತ್ತದೆ
ನೀನು ಪ್ರಾಮಾಣಿಕರಿಗೆ ಮಾತ್ರ ಒಲಿಯುವ ದಿವ್ಯ ಔಷಧ

ದೇವರಿದ್ದಾನೋ ಇಲ್ಲವೋ
ನನಗೆ ಮುಗಿಯದ ಗೊಂದಲ
ಆದರೆ
ಕಂಬನಿಯೇ
ನೀನೊಂದಿಲ್ಲದಿದ್ದರೆ
ಭಾಷೆಯೂ ಸೋಲುವ ಹೊತ್ತಲ್ಲಿ
ನಾನೆಷ್ಟು ಅನಾಥನಾಗಿಬಿಡುತ್ತಿದ್ದೆ…

-ದಾದಾಪೀರ್ ಜೈಮನ್, ರಾಮನಗರ, ಹಗರಿಬೊಮ್ಮನಹಳ್ಳಿ
*****