ಇಂದು ರಸ ಋಷಿ ಕವಿವರ್ಯ ಕುವೆಂಪು ಅವರ ಜನ್ಮದಿನ!
ರಾಷ್ಟ್ರ ಕವಿಗಳ ಹುಟ್ಟುಹಬ್ಬದ ಅಂಗವಾಗಿ ಹೂವಿನ ಹಡಗಲಿಯ ಕವಯಿತ್ರಿ ಶೋಭ ಮಲ್ಕಿಒಡೆಯರ್ ಅವರು ‘ಮೇರು ಪರ್ವತ’ ಕವನದ ಮೂಲಕ ಅಕ್ಷರ ನಮನ ಸಲ್ಲಿಸಿದ್ದಾರೆ!👇💐👇🌺
ಮೇರು ಪರ್ವತ
ಸಹ್ಯಾದ್ರಿಯ ವಸುಧೆಯಲ್ಲಿ ಹುಟ್ಟಿದ
ಕುಪ್ಪಳ್ಳಿಯ ವೆಂಕಟಪ್ಪ ಪುಟ್ಟಪ್ಪ
ಸಾಹಿತ್ಯದ ಸಾಧನೆಯ ಮೇರು ಶಿಖರವೇರಿದ
ಜ್ಞಾನ ಪೀಠ ವಿಜೇತ ಅಪ್ಪ – ದೊಡ್ಡಪ್ಪ //
“ಶ್ರೀ ರಾಮಾಯಣ ದರ್ಶನಂ”ಮಹಾಕಾವ್ಯ ಬರೆದು
ಹೊಸತನವ ಮೆರೆದಿಹರು
ಬೃಹತ್ ಕಾವ್ಯದ ಕರ್ತೃ ಇವರೇ
ಜ್ಞಾನ ದಾಸೋಹಿ ಕವಿ ಕುವೆಂಪುರವರು //
ಮಲೆನಾಡಿನ ವೈಭವ ಬಿಚ್ಚಿಟ್ಟ
“ಮಲೆಗಳಲ್ಲಿ ಮದುಮಗಳು”
ಜೀವನಸಾರ ನಿರೂಪಿಸಿದ “ಕಾನೂರು ಹೆಗ್ಗಡತಿ”
ನಾಟಕ, ಕಥಾ ಸಂಕಲನ, ಕವನ ಸಂಕಲನಗಳು //
ಜ್ಞಾನದ ಜೊತೆಗೆ ವಿಜ್ಞಾನಕ್ಕೂ ಕೊಟ್ಟರು ಮಹತ್ವ
ಭುವನೇಶ್ವರಿಯೊಂದಿಗೆ ಭಾರತಾಂಬೆಗೂ ಗೌರವ
ದೈವ ನಂಬಿದರೂ ಮೂಡತೆಗೆ
ಮರುಳಾಗಲಿಲ್ಲ ಯುಗದ ಕವಿ ಪುಂಗವ //
ಇಂದು ತಮಗೆ ಕೋಟಿ ಜನರ ಶುಭಾಶಯ
ಸಾಹಿತ್ಯ ಸಾಗರದಲ್ಲಿ ಅಚ್ಚೊತ್ತಿದೆ ನಿಮ್ಹೆಸರು
ಶ್ರೀ ಗಂಧದಂತೆ ಘಮ ಪಸರಿಸುತ್ತಿದೆ ಸುತ್ತಲೂ
ಪ್ರತಿ ಶಬ್ದದೊಳು ಹಿಡಿದಿಡುತ್ತೆ ಓದುಗರ ಉಸಿರು //
-ಶೋಭಾ ಪ್ರಕಾಶ್ ಮಲ್ಕಿ ಒಡೆಯರ್✍🏻
ಹೂವಿನ ಹಡಗಲಿ
*****