ಇಂದು(ಡಿ.29) ಆಲಾಪ್ ಸಂಗೀತ ಕಲಾ ಟ್ರಸ್ಟ್ ವತಿಯಿಂದ ಬಳ್ಳಾರಿಯಲ್ಲಿ ಕುವೆಂಪು ಜನ್ಮದಿನಾಚರಣೆ ಮತ್ತು ಸಾಂಸ್ಕೃತಿಕ ಸಂಭ್ರಮ

ಬಳ್ಳಾರಿ, ಡಿ. 29: ನಗರದ ಆಲಾಪ್ ಸಂಗೀತ ಕಲಾ ಟ್ರಸ್ಟ್ (ರಿ) ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ
ವಿಶೇಷ ಘಟಕ ಯೋಜನೆಯಡಿ
ರಾಷ್ಟ್ರಕವಿ ಕುವೆಂಪು ಜನ್ಮದಿನ ಪ್ರಯುಕ್ತ ವಿಚಾರ ಸಂಕಿರಣ, ಕೂಚಿಪುಡಿ ನೃತ್ಯ, ವಚನಗಾಯನ, ರಂಗಗೀತೆ, ನಾಟಕ ಸಂಭ್ರಮ ಕಾರ್ಯಕ್ರಮ ಡಿ.29 ರಂದು ಮಧ್ಯಾಹ್ನ 2ಗಂಟೆಗೆ ಸ್ಥಳೀಯ ಹಿರಾಳ ಕುಡಂ ಈದ್ಘಾ ರಸ್ತೆಯಲ್ಲಿರುವ
ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ನಿವೃತ್ತ ಉಪನ್ಯಾಸಕರಾದ ಎನ್ ಬಸವರಾಜ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ಅಧ್ಯಕ್ಷತೆಯನ್ನು
ಕರ್ನಾಟಕ ಜಾನಪದ ಪರಿಷತ್ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ.ಮಂಜುನಾಥ್ ವಹಿಸುವರು.
ಗೌರವಾನ್ವಿತ ಅತಿಥಿಗಳಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಆದೋನಿ ವೀಣಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ‌ ನಿರ್ದೇಶಕ ಸಿದ್ಧಲಿಂಗೇಶ್ವರ ರಂಗಣ್ಣನವರ್,
ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯ ಗುರು ಎಂ ಕುಮಾರ ಸ್ವಾಮಿ, ರಂಗ ಕಲಾವಿದ ವಿ ರಾಮಚಂದ್ರ ಅವರು ಉಪಸ್ಥಿತರಿರುವರು.

ಉಪನ್ಯಾಸ: ವಿ ಎಸ್ ಕೆ ವಿಶ್ವವಿದ್ಯಾಲಯದ ಪ್ರದರ್ಶನ ಕಲೆ,ನಾಟಕ ವಿಭಾಗದ ಉಪನ್ಯಾಸಕ ಡಾ: ಅಣ್ಣಾಜಿ ಕೃಷ್ಣಾರೆಡ್ಡಿ ಅವರು ಕುವೆಂಪು ನಾಟಕಗಳ ವೈಶಿಷ್ಟ್ಯತೆ ಕುರಿತು, ‌ರಂಗಭೂಮಿ ಕುರಿತು ಹಿರಿಯ ರಂಗ ಕಲಾವಿದ, ಪತ್ರಿಕಾ ಛಾಯಾಗ್ರಹಕ ಪುರುಷೋತ್ತಮ ಹಂದ್ಯಾಳು ಅವರು ಉಪನ್ಯಾಸ ನೀಡುವರು.


ಅಭಿನಯ ಎಸ್ ತಂಡ ಇವರಿಂದ ಕೂಚಿಪುಡಿ ನೃತ್ಯ
ಶ್ರೀಮತಿ ಓಂಕಾರಮ್ಮ ಕಪ್ಪಗಲ್ಲು ತಂಡದಿಂದ ರಂಗಗೀತೆ, ಸಿದ್ದ ರಾಮೇಶ್ವರ ವಿ. ಮತ್ತು ತಂಡದಿಂದ ವಚನ ಗಾಯನ, ವಿ.ರಾಮಚಂದ್ರ ತಂಡದಿಂದ ಸ್ವಾತಂತ್ರ್ಯ ಹಳ್ಳಿ ನಾಟಕ ಪ್ರದರ್ಶನವಿರುತ್ತದೆ ಎಂದು
ಅಲಾಪ್ ಸಂಗೀತ ಕಲಾ ಟ್ರಸ್ಟ್ ಅಧ್ಯಕ್ಷ ರಮಣಪ್ಪ ಭಜಂತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*****