ಅನುದಿನ‌ ಕವನ-೭೩೬, ಯುವ ಕವಿ: ಸಂದೇಶ್ ಕುಲಕರ್ಣಿ, ಹಗರಿಬೊಮ್ಮನಹಳ್ಳಿ, ರಾಗ ಸಂಯೋಜನೆ ಮತ್ತು ಗಾಯನ: ಪ್ರದೀಪ್ ಅಕ್ಕಸಾಲಿ, ಹಗರಿಬೊಮ್ಮನಹಳ್ಳಿ, ಕವನದ ಶೀರ್ಷಿಕೆ: ಏನೊ ಬರೆದಿರುವೆ ನಾ ಇದರೊಳಗೆ….

ಏನೊ ಬರೆದಿರುವೆ ನಾ ಇದರೊಳಗೆ

ಏನೊ ಬರೆದಿರುವೆ ನಾ ಇದರೊಳಗೆ
ವಿವರಿಸಿ ಹೇಳು ನಿ ಕೊನೆವರೆಗೆ
ನೀ ನುಡಿವ ಪದಗಳನು
ಕೇಳುತ ಇರುವನೆ ಮನದೊಳಗೆ

ಏನೊ ಬರೆದಿರುವೆ ನಾ ಇದರೊಳಗೆ
ವಿವರಿಸಿ ಹೇಳು ನಿ ಕೊನೆವರೆಗೆ

ಅರ್ಥವಿಲ್ಲದ ಪದಗಳನು ತಿಳಿಯದೆ ಅರ್ಥೈಸದಿರು
ಮನಸಿಗೆಹಿಡಿಸದ ಮಾತುಗಳ ಯಾತಕು ಬಳಸದಿರು
ಮರೆತುಹೋದ ಮಾತಿಂದ ಮರೆಯಲಾಗದ ನೆನಪಿಂದ
ನೋವಾದರೆ ಕ್ಷಮಿಸದಿರು

ಏನೊ ಬರೆದಿರುವೆ ನಾ ಇದರೊಳಗೆ
ವಿವರಿಸಿ ಹೇಳು ನಿ ಕೊನೆವರೆಗೆ

ಚೂರು ಉಳಿದ ಜಾಗದಲಿ ಬರೆಯುವುದು ಏನೋ ಬಿಟ್ಟಿರುವೆ
ನೀನೇ ಬರೆಯಲಿ ಅಂತ ಕಾಯುತ ನಾನು ಕುಳಿತಿರುವೆ
ನೀ ಏನು ಬರೆಯುವೆ ಅಂತ ನಿನಗು ಮೊದಲೆ ನಾ ತಿಳಿದಿರುವೆ

ಏನೊ ಬರೆದಿರುವೆ ನಾ ಇದರೊಳಗೆ
ವಿವರಿಸಿ ಹೇಳು ನಿ ಕೊನೆವರೆಗೆ
ನೀ ನುಡಿವ ಪದಗಳನು
ಕೇಳುತ ಇರುವನೆ ಮನದೊಳಗೆ


-ಸಂದೇಶ್ ಕುಲಕರ್ಣಿ, ಹಗರಿಬೊಮ್ಮನಹಳ್ಳಿ👆

 

👆ರಾಗ ಸಂಯೋಜನೆ-ಗಾಯನ: ಪ್ರದೀಪ್ ಅಕ್ಕಸಾಲಿ, ಹಗರಿಬೊಮ್ಮನಹಳ್ಳಿ
*****