ಮುಸುಕು ತೆಗೆಯೇ ಮಾಯಾಂಗಿ
ಅಂತ್ಯವಿಲ್ಲದ ನೌಕೆಗೆ
ಕಡಲ ಅಲೆ ಚಿಂತಿಸುತಿದೆ..
ಬಿಗುವಿದ್ದ ದೇಹದಿ
ಕಣ್ಣೀರ ಸಾಗರ ತೊಟ್ಟು..
ಏಕೋ ಅರಿಯೆ ಎದೆಯು ಭಾರ?…
ಮುಸುಕು ಮುಗುಚಿ
ಅರಚುವ ಬಾಯಾರಿಕೆಗೆ
ಇಬ್ಬನಿ ಹನಿ ಬೆವರಿಸುತಿದೆ…
ಕಗ್ಗತ್ತಲ ಕೊಲೆಯ ಜಾಲದಿ
ಜಾತ್ಯಾತೀತದ ಸರಪಳಿಯ
ಮೇಣ ಕರಗಿ ಬೆಳಕ ಹರಿಸಲು
ಬೇಲಿಯೇ ಭುವಿಯ ಎದೆಗೆ
ಮುಳ್ಳ ನಾಟಿದೆ…..
ತೊಳಲಿಕೆಯ ಬೇಸರದಿ
ಸೋತ ಕಾಲೊಳು
ಅಂದಿಗೆಯ ತಳ ಅಳುಕುತಿದೆ..
ಮುಂದೆ ಸಾಗದ ಗಡಿಯಾರಕೆ
ಭಯದ ಕನವರಿಕೆಯ ಭ್ರಮೆ…
ಬೆನ್ನ ಹಿಂದಣದ ಬಂಧುವಿನ
ಚೂರಿ ಒಡಲ ತಿವಿದು
ಕಣ್ಣ ಪಿಳಿಸಿ ನಗುತಿದೆ..
ಹೇ ಆಗೋಚರ ಪವಾಡವೆ
ಪ್ರಜ್ಞಾನದ ನಿದಿರೆಗೆ
ಲಾಲಿ ಹಾಡು……..
-ಡಾ.ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ
*****