ಬಳ್ಳಾರಿ, ಜ.13: ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲೆಯ ಸಂಡೂರು ತಾಲೂಕಿನ ಹಳೇ ದರೋಜಿ ಗ್ರಾಮದ ಡಾ ವಿ ರಾಮಾಂಜಿನೇಯ (ಅಶ್ವ ರಾಮು) ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಾನಪದ ವಿಭಾಗದಲ್ಲಿ ಡಾ. ಅಶ್ವ ರಾಮು ಅವರ ‘ಅಲೆಮಾರಿ ಅನನ್ಯತೆ’ ಕೃತಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಡಾ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ದ ಕುಲಪತಿ ಪ್ರೊ ನಾಗೇಶ ವ್ಹಿ ಬೆಟ್ಟಕೋಟೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ, ಸಿಂಡಿಕೇಟ್ ಸದಸ್ಯ ಪ್ರೊ ಕೆ ಲಿಂಗಪ್ಪ, ವಿದ್ಯಾವಿಷಯಕ ಪರಿಷತ್ ಸದಸ್ಯ ಪ್ರೊ ವಾಘ್ಮೋರೆ ಶಿವಾಜಿ, ಕುಲಸಚಿವ ಡಾ ಬಿ ಶರಣಪ್ಪ , ಪ್ರಸಾರಾಂಗ ನಿರ್ದೇಶಕ ಪ್ರೊ ಎಚ್ ಟಿ ಪೋತೆ, ಧಾರವಾಡ ವಿಶ್ವವಿದ್ಯಾಲಯದ ಪ್ರೊ ನಿಂಗಪ್ಪ ಮುದೇನೂರು ಅವರು ಉಪಸ್ಥಿತರಿದ್ದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಸಾರಂಗ ಪ್ರತಿ ವರ್ಷವೂ ಕಲ್ಯಾಣ ಕರ್ನಾಟಕ ಪ್ರದೇಶದ ಕನ್ನಡ ಸೃಜನ, ಸೃಜನೇತರ ಸಾಹಿತ್ಯ, ವಚನ, ಜಾನಪದ, ಜೀವನ ಕಥನ , ಜಾನಪದ ಕಲಾವಿದ ಹಾಗೂ ಸಮಾಜ ವಿಜ್ಞಾನ, ಚಿತ್ರಕಲಾ ಕೃತಿಗಳಿಗೆ , ಶಿಲ್ಪ ಕಲಾವಿದರಿಗೆ , ಪ್ರಕಾಶಕರಿಗೆ, ಗಡಿನಾಡು ಲೇಖಕರಿಗೆ, ಅನುವಾದ , ಕನ್ನಡ ಭಾಷಾ ಲೇಖಕರ ಕೃತಿಗಳಿಗೆ ಗೌರವದನ, ವಿಜ್ಞಾನ ಹಾಗೂ ಡಾ. ಬಿ. ಆರ್ ಅಂಬೇಡ್ಕರ್ ಕುರಿತು ರಚಿಸಿದ ಕೃತಿಗಳಿಗೆ ರಾಜ್ಯಮಟ್ಟದ ಪುಸ್ತಕ ಬಹುಮಾನ ನೀಡಿ ಗೌರವಿಸುತ್ತದೆ.
ಡಾ. ವಿ. ರಾಮಾಂಜಿನೇಯ(ಅಶ್ವರಾಮು) ಅವರು 2021ರಲ್ಲಿ ಪ್ರಕಟಿಸಿದ್ದ ಅಲೆಮಾರಿಯ ಅನನ್ಯತೆ ಜಾನಪದ ವಿಭಾಗದ ಉತ್ತಮ ಕೃತಿ ಎಂದು ಪರಿಗಣಿಸಿ 5000 ಗೌರವಧನ ಮತ್ತು ಪ್ರಶಸ್ತಿ ಫಲಕವನ್ನು ಗಣ್ಯರ ಸಮ್ಮುಖದಲ್ಲಿ ನೀಡಿ ಸತ್ಕರಿಸಲಾಯಿತು.
*****