ಬಳ್ಳಾರಿ ಉತ್ಸವ: ಟಾಪ್ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಕಂಪ್ಲಿ ಶಾಸಕ‌ ಜೆ ಎನ್ ಗಣೇಶ್

ಬಳ್ಳಾರಿ, ಜ.21: ಗ್ರಾಮೀಣ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಐ.ಎ.ಎಸ್. ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಯಶಸ್ವಿಯಾಗಬೇಕು ಎಂದು ಕಂಪ್ಲಿ‌ ಶಾಸಕ ಜೆ ಎನ್ ಗಣೇಶ ಅವರು ಹೇಳಿದರು.
ಅವರು ಬಳ್ಳಾರಿ ಉತ್ಸವದ ಅಂಗವಾಗಿ ವಿಮ್ಸ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪುರುಷರ ಮತ್ತು ಮಹಿಳೆಯರ ಕಬಡ್ಡಿ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳ ಬಗ್ಗೆಯೂ ವಿದ್ಯಾರ್ಥಿಗಳು ಗಮನ ನೀಡಬೇಕು ಎಂದು ತಿಳಿಸಿದರು.
ಬಳಿಕ 2021-22 ನೇ ಸಾಲಿನಲ್ಲಿ
ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಬಳ್ಳಾರಿ ತಾಲ್ಲೂಕಿಗೆ ಟಾಪ್ ಬಂದಿರುವ ಸರ್ಕಾರಿ ಪ್ರೌಢಶಾಲೆ ಸಿಂಧಿಗೇರಿ, ದಮ್ಮೂರು ಮತ್ತು ಬಸರಕೋಡು ಗ್ರಾಮದ
ಮೂವರು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಿದರು.


ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ (ಆಡಳಿತ) ಅಂದಾನಪ್ಪ ಎಂ ವಡಿಗೇರಿ, ಪೂರ್ವ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಯ್ಯ, ಟಿಪಿಇಒ ವೀರನಗೌಡ ಗೌಡರ್, ಮುಖ್ಯ ಶಿಕ್ಷಕರಾದ ನರಸಿಂಹಮೂರ್ತಿ, ಅನುಪಮ ದೇಸಾಯಿ , ಹನುಮಂತ ಕಂದಗಲ್, ಶಿಕ್ಷಕರಾದ ಲೋಕೇಶ್, ಗಿರೀಶ್, ಭುವನೇಶ್ವರಿ ಸಿ.ಆರ್.ಪಿ.ಗಳಾದ ಮಹಾಂತೇಶ, ಲವಕುಮಾರ್, ಅಕ್ರಂವುಲ್ಲಾ, ಮಲ್ಲಿಕಾರ್ಜುನ ಉಪಸ್ಥಿತರಿದ್ದರು.
ಎಸ್.ಎಸ್.ಎಲ್.ಸಿ.ತಾಲೂಕು ನೋಡೆಲ್ ಅಧಿಕಾರಿ, ಶಿಕ್ಷಣ ಸಂಯೋಜಕರಾದ ಗೂಳೆಪ್ಪ ಕಾರ್ಯಕ್ರಮ ನಿರ್ವಹಿಸಿದರು.
*****