ಅನುದಿನ‌ ಕವನ-೭೫೪, ಕವಯಿತ್ರಿ: ಧರಣೀಪ್ರಿಯೆ, ದಾವಣಗೆರೆ

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳೊಂದಿಗೆ..

ಹೆಣ್ಣಿಲ್ಲದೆ ಜಗವಿಲ್ಲ ಅರಿಯಬೇಕು ಜನರೆಲ್ಲ
ಹೆಣ್ಣಿವಳು ಸಂಸಾರದ ಕಣ್ಣರಿಯಿರಿ
ಹೆಣ್ಣಿವಳು ಮನೆಲಕುಮಿ ಗೌರವಿಸಿ ಮಾನವರೆ
ಹೊನ್ನಂತೆ ತವರೀಗೆ – ಧರಣಿದೇವಿ|

ಮನೆಯೊಡತಿ ಮಹತಾಯಿ ಒಲವಿನಾ ಖನಿಯಿವಳು
ಮನದೊಡತಿ ಪ್ರಿಯತಮಗೆ ಜೀವನದಲಿ
ಅನುದಿನವು ಕಾಯಕದಿ ತೊಡಗುತಲಿ ಮನೆಯಲ್ಲಿ
ಜನರನ್ನು ಸಂಬಳಿಸಿ-ಧರಣಿದೇವಿ|

ಹೆಣ್ಣೊಂದು ಹೂವಂತೆ ಕೋಮಲೆಯು ಭಾವದಲಿ
ಬಣ್ಣನೆಗೆ ಸಹಸ್ರಾರು ಸಾಲುಗಳವು
ಸಣ್ಣತನ ಮೆರೆಯುವವು ನಿಲುಕದಾ ಮಿತಿಯಲ್ಲಿ
ಹೆಣ್ಣವಳು ದೇವತೆಯು-ಧರಣಿದೇವಿ|


-ಧರಣೀಪ್ರಿಯೆ, ದಾವಣಗೆರೆ
*****