ಹಂಪಿ ಉತ್ಸವದಲ್ಲಿ ಮಿಂಚಿದ ಹಗರಿಬೊಮ್ಮನಹಳ್ಳಿ ಸಂಗೀತ ಸಾಧಕರು

ಹಗರಿಬೊಮ್ಮನಹಳ್ಳಿ, ಫೆ2: ಇತ್ತೀಚೆಗೆ ಜರುಗಿದ ಹಂಪಿ ಉತ್ಸವದಲ್ಲಿ ಪಟ್ಟಣದ ಸಂಗೀತ ಶಿಕ್ಷಕಿ ಶಾರದ ಕೊಪ್ಪಳ ಮತ್ತು ಯುವ ಪ್ರತಿಭೆ ಪ್ರದೀಪ್ ಅಕ್ಕಸಾಲಿ ಅವರು ಉತ್ತಮ‌ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.
ವಿರೂಪಾಕ್ಷೇಶ್ವರ ದೇವಸ್ಥಾನದ ವೇದಿಕೆಯಲ್ಲಿ ಶಾರದ ಕೊಪ್ಪಳ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನದಲ್ಲಿ ರಾಗ ಮುಲ್ತಾನಿಯ ಬಡಖ್ಯಾಲ್ ,ಚೋಟಖ್ಯಾಲ್,ತರಾನ್ ಪ್ರಸ್ತುತ ಪಡಿಸಿದರು. ರೇವಣಸಿದ್ದ ಆಚಾರ್ ತಬಲ ಸಾಥ್, ತಂಬೂರಿ ಸಾಥ್ ಬಿ ಯುವರಾಜಗೌಡ ಮೋರಗೇರಿ ಹಾಗೂ ಬಾಲಪ್ರತಿಭೆ ರವಿಶಂಕರ್ ನೀಡಿದರು.

ಹಂಪಿ ಉತ್ಸವದ ಪ್ರಮುಖ ಗಾಯಿತ್ರಿ ಪೀಠದ ಮುಖ್ಯ ವೇದಿಕೆಯಲ್ಲಿ ಯುವ ಪ್ರತಿಭೆ ಪ್ರದೀಪ್ ಅಕ್ಕಸಾಲಿ ಅವರ ವಯೋಲಿನ್ ಸೋಲೋ ಕಾರ್ಯಕ್ರಮ ನೆರೆದಿದ್ದ ಸಂಗೀತ ಪ್ರಿಯರನ್ನು ಮುದಗೊಳಿಸಿತು.
ತಬಲಾ ದಲ್ಲಿ ಮಲ್ಲಿಕಾರ್ಜುನ ಬಡಿಗೇರ
ಕೀ ಬೋರ್ಡ್ ನಲ್ಲಿ ಶಂಕ್ರಾಚಾರ್,
ತಾನ್ ಪುರ ದಲ್ಲಿ ಉಮಾಪತಿ ಅಕ್ಕಸಾಲಿ ಮತ್ತು ಐಶ್ವರ್ಯ ಪ್ರದೀಪ್ ಸಾಥ್ ನೀಡಿದರು.


*****