ಮನದ ಹಕ್ಕಿ
ಹಾಡು ಮನವೆ ಹಾಡು
ಹೃದಯದ ಬಯಕೆ ಮುಗಿವನಕ
ಕನಸ ಕಡಲು ಉಕ್ಕುವತನಕ
ಹಾಡಲೇನಿದೆ
ಮನದ ಮೌನ ಮುರಿಯಲೇಕೊ ಕವಳಿಕೆ
ಮನದ ಬಯಕೆ ಬತ್ತಿದೆ
ಕನಸ ಬಾಗಿಲು ತೆರೆಯದ ಬಳಿಕ ಹಾಡಲೇನಿದೆ
ಮೌನ ಕಳೆದು ಹೊರಗೆ ಬಾ
ಮನದ ಗೂಡು ತೊರೆದು ಬಾ
ಹೃದಯ ಬಿಚ್ಚಿ ರೆಕ್ಕೆ ಕೆದರಿ
ಕನಸ ಚಿಗುರಿಸಿ ಮೈದುಂಬಿ
ಹಾಡು ಮನವೆ ಹಾಡು
ಸ್ವೇಚ್ಛೆಯಾಗಿ ಅಸೆ ಮುಗಿವನಕ
ಸಂತಸದ ಪನ್ನೀರು ಹರಿವನಕ
ಒಡಲ ಹಾಡು ಬರಿದಾಗುವತನಕ
ಅಂತಃಶಕ್ತಿ ಬತ್ತುವತನಕ
ಹಾಡು ಮನವೆ ಹಾಡು ಹಾಡುತ್ತಲೇ ಇರು
-ಭಾರತಿ ಅಶೋಕ್, ಹೊಸಪೇಟೆ *****