ಅನುದಿನ ಕವನ-೭೭೪, ಹಿರಿಯ ಕವಿ: ಎಚ್.ಡುಂಡಿರಾಜ್, ಬೆಂಗಳೂರು, ಕವನದ ಶೀರ್ಷಿಕೆ:ಕಪ್ಪಣ್ಣನಿಗೆ ಎಪ್ಪತ್ತೈದೆ?

ಕಪ್ಪಣ್ಣನಿಗೆ ಎಪ್ಪತ್ತೈದೆ?

ಎಪ್ಪತ್ತೈದು ಆಯಿತಂತೆ ಆದರೆ ಅರೆ!
ಹಾಗೆ ಕಾಣಿಸುವುದಿಲ್ಲ ಕಪ್ಪಣ್ಣ
ಗಡಿಬಿಡಿಯಲ್ಲಿ ಲೆಕ್ಕಹಾಕಿದ್ದಾರೆ ವಯಸ್ಸು
ಮಾಡಿದ್ದಾರೆ ಎಣಿಸುವಾಗ ತಪ್ಪನ್ನ

ಕಷ್ಟಜೀವಿ, ಸೋಲೊಪ್ಪದ ಸಂಘಟಕ
ಛಲಗಾರ ಶ್ರೀನಿವಾಸ ಜಿ ಕಪ್ಪಣ್ಣ
ಇವರ ಸಲಹೆ ಪಡೆದರೆ ಖಂಡಿತ ಈ ಸಲ
ಗೆಲ್ಲಬಹುದು ಆರ್‌ ಸಿ ಬಿ ಕಪ್ಪನ್ನ!

ಸಾಂಸ್ಕೃತಿಕ ಲೋಕದಲ್ಲಿ ನೂರ್ಕಾಲ ಹೀಗೆ
ಖುಷಿಯಾಗಿರಲಿ ನಮ್ಮ ಕಪ್ಪಣ್ಣ
ಅಣ್ಣನ ಸಂಗದಿಂದ ನನ್ನಂಥ ತಮ್ಮಂದಿರು
ಮರೆಯಬಹುದು ನಮ್ಮ ಮುಪ್ಪನ್ನ!


-ಎಚ್.ಡುಂಡಿರಾಜ್, ಬೆಂಗಳೂರು
*****