ಅನುದಿನ ಕವನ-೭೭೫, ಕವಿ: ಕೆ.ಬಿ.ವೀರಲಿಂಗನಗೌಡ್ರ. ಬಾದಾಮಿ ಕವನದ ಶೀರ್ಷಿಕೆ: ಕೇಳು….

ಕೇಳು..

ಪ್ರೀತಿಯೆಂದರೆ
ಗುಟ್ಟಾಗಿ ಗುನುಗುವುದಲ್ಲ
ಸುಟ್ಟು ರೊಟ್ಟಿಯಂತಾಗುವುದು

ಪ್ರೀತಿಯೆಂದರೆ
ಬರೀ ಕಾಯುವುದಲ್ಲ
ಕಾಯ್ದು ಹೆಪ್ಪಾಗಿ ತುಪ್ಪವಾಗುವುದು

ಪ್ರೀತಿಯೆಂದರೆ
ಹಾರಾಡುವುದಲ್ಲ
ಫೀನಿಕ್ಸ್ ಹಕ್ಕಿಯಂತಾಗುವುದು

ಪ್ರೀತಿಯೆಂದರೆ
ಮಥಿಸುವುದಲ್ಲ
ಮಾನವೀಯತೆಯ ಸ್ತುತಿಸುವುದು

ಪ್ರೀತಿಯೆಂದರೆ
ಶರಣಾಗುವುದಲ್ಲ
ಶರಣ ಸಂಸ್ಕೃತಿಗೆ ಅಣಿಯಾಗುವುದು

ಪ್ರೀತಿಯೆಂದರೆ
ಮುದ್ದಾಡುವುದಲ್ಲ
ಎದ್ದುಹೋಗಿ ಬುದ್ಧನಂತಾಗುವುದು


-ಕೆ.ಬಿ.ವೀರಲಿಂಗನಗೌಡ್ರ. ಬಾದಾಮಿ                             (ಗುಬ್ಬಿ ಚಿತ್ರ: ರಘುಕುಮಾರ್.ಸಿ)
*****