ಅನುದಿನ ಕವನ-೭೭೯, ಕವಿಯಿತ್ರಿ: ಶೋಭ ಪ್ರಕಾಶ್ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ:ಸರ್ವಾಂತರ್ಯಾಮಿ

ಸರ್ವಾಂತರ್ಯಾಮಿ

ಶಿವ – ಶಿವ ಎನ್ನುತ ಭಕ್ತಿಯಲಿ
ಸದಾ ಸ್ಮರಣೆಯ ಮಾಡೋಣ
ತನ್ಮಯದಿ ಧ್ಯಾನವ ಮೌನದಿ ಸ್ತುತಿಸುತ
ಮಂತ್ರ ಪಠಣವ ಜಪಿಸೋಣ ||

ಸತ್ಯ ಧರ್ಮ ಶಾಂತಿಯಿಂದಲಿ ಕರೆಯಲು
ಅವತರಿಸಿಹನು ಕರುಣಾಮಯಿ ಶ್ರೀ ಕಂಠ
ಜಟೆಯಲಿ ಗಂಗೆಯ ಹೊತ್ತಿಹ
ಜಠಾದರ ಪರಶಿವ ನೀಲಕಂಠ ||

ನಾಗಸರ್ಪವನ್ನು ಕೊರಳೊಳು ಸುತ್ತಿಹ
ಮುಕ್ಕಣ್ಣನಿಗೆ ನಮಿಸೋಣ ಶಿರಬಾಗಿ
ಢಮರುಗ ಹಿಡಿದು ಜಗವನೆ ಸುತ್ತುವ
ಸ್ಮಶಾನದಲ್ಲಿ ನೆಲೆಸಿಹ ಬೈರಾಗಿ ||

ಶಿವನ ಸಾನಿಧ್ಯದಿ ನಿತ್ಯ ನಿರ್ಮಲದಿ
ಜಪ ತಪವ ಮಾಡೋಣ ಮನ ಶುದ್ದಿಯಲಿ
ಶಿವರಾತ್ರಿಯ ಜಾಗರಣೆಯಲಿ
ಶಿವನೊಲುಮೆಗೆ ಪಾತ್ರವಾಗೋಣ ಶ್ರದ್ದೆಯಲಿ ||

-ಶೋಭಾ ಪ್ರಕಾಶ್ ಮಲ್ಕಿ ಒಡೆಯರ್ ✍🏻
ಹೂವಿನ ಹಡಗಲಿ