ಕಿತ್ತೋದ್ ಪ್ರೀತಿ
ಬಾನ ದಾರಿಯಲ್ಲಿ ಅವಳು
ಅಲ್ಲೆಲ್ಲಿ ದಾರಿ ಅಂತ ಅವನು
ಹೂವಿನ ನಗುವಲ್ಲಿ ನಾನು
ಹೂವೆಲ್ಲಿ ನಗುತೈತೆ ಅಂತ ಅವನು
ಎಲ್ಲೆಲ್ಲು ನೀನೆ ನನ್ನಲ್ಲು ನೀನೆ
ಎನ್ನುವ ಅವಳು
ನನ್ ಮನೆಲಿ ನಾನು ನಿನ್ ಮನೆಲಿ ನೀನು ಎನ್ನೋ ಅವನು
ನಾ ನಿನ್ನಲ್ಲಿ ನೀ ನನ್ನಲ್ಲಿ ಎನ್ನೊ ಅವಳು
ನನ್ ಪಾಡಿಗ್ ನಾನು ನಿನ್ ಪಾಡಿಗ್ ನೀನು
ಎನ್ನುವ ಅವನು
ನಾ ಬಂದೆ ನಲ್ಲ ನಿನಗ್ ನಾ ಕಾಣುತ್ತಿಲ್ಲ ಎಂದ ಅವಳು
ಅಯ್ಯೋ ನೀ ದೆವ್ವನ
ಅಂದ್ಕೊಂಡಿದ್ದೆ ನೀ ಮನುಷ್ಯೆ ಅಂತ ನಾ
ಹಲುಬುತ್ತಿದ್ದ ಅವನು
ಪ್ರೇಮವೆಂದರೆ ಎರಡು ಹೃದಯಗಳ ಮಿಲನ
ನುಲಿಯುತ್ತಿದ್ದ ಅವಳು
ಇದ್ಯಾವ್ ಟೈಪ್ ಆಪರೇಷನ್ನು
ಸಾಕಲ್ಲವ ಒಂದೇ ದೇಹಕ್ಕೆ ಒಂದೇ ಹೃದಯ
ವಿಜ್ಞಾನ ಉಲಿದ ಅವನು
ಕಮಾನ್ ಡಾರ್ಲಿಂಗ್
ಮುಟ್ಟದೆಯೇ ಮುದ್ದಾಡುವೆ
ವಿರಹ ವ್ಯಕ್ತಿಸಿದ ಅವಳು
ಮುಟ್ಟದೆಯೇ? ನಾವಿಬ್ಬರು ಏನು ಆಯಸ್ಕಾಂತದ ವಿರುದ್ಧ ಧೃವಗಳಾ?
ಭೌತಶಾಸ್ತ್ರವ ಬೋಧಿಸಿದ ಅವನು
ಇದ್ಯಾವುದೊ ನಿಂದು ಬಿಕನಾಸಿ ಪ್ರೀತಿ
ಮುನಿದಳು ಅವಳು
ಇದೇ ನಿಜ ಪ್ರೀತಿ ಈಗ ಚಂದ ಕಾಣುತಿ
ಹತ್ತಿರ ಬಂದ ಅವನು…
-ರಘೋತ್ತಮ ಹೊ.ಬ, ಮೈಸೂರು
*****