ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್ತಿನ ಅಖಂಡ ಬಳ್ಳಾರಿ ಜಿಲ್ಲಾ ೨೨ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನವಾದ ಬುಧವಾರ ಸಂಜೆ ರಾಘವ ಕಲಾ ಮಂದಿರದಲ್ಲಿ ಜರುಗಿದ ದನ ಕಾಯೋರ ದೊಡ್ಡಾಟ ಹಾಸ್ಯ ನಾಟಕ ಸಭಿಕರನ್ನು ಮುದಗೊಳಿಸಿತು.
ಸಾರಥಿ ಪಾತ್ರದಲ್ಲಿ ಪುರುಷೋತ್ತಮ ಹಂದ್ಯಾಳು, ಗೌಡನಾಗಿ ಪತ್ರಕರ್ತ ಎನ್. ವೀರಭದ್ರಗೌಡ ,ಗಣೇಶನಾಗಿ ಚಂದ್ರಶೇಖರ ಆಚಾರ್, ದುರ್ಯೋಧನನಾಗಿ ಅಮರೇಶ್, ದುಶ್ಯಾಸನನಾಗಿ ಪಾರ್ವತೀಶ್ ಗೆಣಕೆಹಾಳ್, ಭೀಮ ಮತ್ತು ಕುಡುಕನ ಪಾತ್ರದಲ್ಲಿ ಜಡೇಶ್ ಎಮ್ಮಿಗನೂರು ಮಿಂಚಿದರು.
ಕೃಷ್ಣನ ಪಾತ್ರದಲ್ಲಿ ಎರ್ರಿಸ್ವಾಮಿ, , ದ್ರೌಪದಿ ಪಾತ್ರದಲ್ಲಿಮೌನೇಶ್ ಕಲ್ಲಳ್ಳಿ, ಅಗಸನ ಪಾತ್ರದಲ್ಲಿ ಕುಮಾರ್ ಗೌಡ ಅಮರಾಪುರ,
ನಕುಲ ತಳವಾರ್ ಹೊನ್ನೂರ್ ಸ್ವಾಮಿ, ಸಹದೇವ ಪಾತ್ರದಲ್ಲಿ
ವಿಶೇಷ ಪಾತ್ರದಲ್ಲಿ ಭೀಮಣ್ಣಬದನೇಹಾಳು ಭೀಮಿನೇನಿ ಪ್ರಸಾದ್ ಹಾಗೂ ಎಲ್ಲನಗೌಡ ಶಂಕರ ಬಂಡೆ ಕರೆಂಟ್ ಹನುಮಂತ ಗಮನ ಸೆಳೆದರು. ಹಾರ್ಮೋನಿಯಂ ಸಣ್ಣಹೊನ್ನೂರುಸ್ವಾಮಿ ಶಂಕರ ಬಂಡೆ, ಡೋಲಾಕ್ ಗಾದಿಲಿಂಗಪ್ಪ ಅಮರಾಪುರ ನಿರ್ವಹಿಸಿದರು.
ಶ್ರೀ ಮಹಾದೇವತಾತ ಕಲಾಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳು ಅವರ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.