ಅನುದಿನ ಕವನ-೭೯೨, ಕವಿ: ಪ್ರೊ.ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು ಕವನದ ಶೀರ್ಷಿಕೆ: ಶಿಕ್ಷಣದ ಶಿಖರಗಳು, ರಾಗ ಸಂಯೋಜನೆ: ಪಿ. ನೀತೂ ನಿನಾದ್, ಮೈಸೂರು & ಋತ್ವಿಕ್ ಸಿ. ರಾಜ್, ಮೈಸೂರು, ಗಾಯನ: ಋತ್ವಿಕ್ ಸಿ. ರಾಜ್, ಮೈಸೂರು

ಶಿಕ್ಷಣದ ಶಿಖರಗಳು

ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ
ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ
ಅಕ್ಷರದ ಅಕ್ಕರೆಗೆ ಸಕ್ಕರೆಯ ಸಜ್ಜನಿಕೆ
ಓನಾಮ ವಂಚಿತರಿಗೆ ಕಲಿಸುವಾ ಕಾಯಕಕೆ
ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ !! ಪ !!

ಕಾಗುಣಿತ ಬಿತ್ತಲು ಹಣೆಬರಹ ಬರೆಯಲು
ಸಮಾನತೆಯ ಬೆಳೆಸಲು ಸ್ವಾಭಿಮಾನ ತುಂಬಲು
ಬಡವರ ಬದುಕಿಗೆ ಜಗದ ಜ್ಯೋತಿಯಾದಿರಿ
ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ !! ಪ !!

ವಿಜ್ಞಾನದ ದೀಪಗಳು ಝಗಮಗಿಸಿ ಬೆಳಗಲು
ಇತಿಹಾಸದ ಬೇರುಗಳ ಆಳವಾಗಿ ಅರಿಯಲು
ಶಿಕ್ಷಣದ ಹಕ್ಕುಗಳ ಮನವರಿಕೆ ಮಾಡಿದಿರಿ
ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ !! ಪ !!

ಸಾವಿತ್ರಿಫುಲೆ ಬೋಧನೆ ಮಹಿಳೆಯರ ಓದಿಗೆ
ಅಂಬೇಡ್ಕರ್‌ ರೂಪದಲಿ ವಿಶ್ವಜ್ಞಾನಿ ಉಡುಗೊರೆ
ಶೂದ್ರರ ಬದುಕಿಗೆ ದಾರಿದೀಪವಾದಿರಿ
ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ !! ಪ !!

ನಾಲ್ವಡಿ ಒಡೆಯರು ಶಾಲೆಗಳ ತೆರೆದರು
ಶಾಹು ಮಹಾರಾಜರು ಬೆಂಬಲಕ್ಕೆ ನಿಂತರು
ಮಾಳವೀಯ ಟ್ಯಾಗೋರು ಜೊತೆಯಾಗಿ ನಡೆದರು
ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ !! ಪ !!

ದೇಶದ ಉದ್ದಗಲ ಶಿಕ್ಷಣದ ಶಿಖರಗಳು
ರೈತರ ನೆರವಿಗೆ ಬೇಸಾಯದ ಶಿಕ್ಷಣ
ಆಧುನಿಕ ಅರಿವಿಗೆ ಜಾಗತಿಕ ಕಲಿಕೆಗೆ
ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ !! ಪ !!

ವಂದಿಪೆವು ನಿಮಗೆ ನಾವು ಅಕ್ಷರ ಸವಿದವರು ಸೇರಿ
ಸ್ಮರಿಸುವೆವು ನಿಮ್ಮ ನಾವು ಚಣಚಣದ ನುಡಿಯಲಿ
ಹಾಡುಕಟ್ಟಿ ಹಾಡುವೆವು ನಮ್ಮ ಕೊರಳ ದನಿಯಲಿ
ಲಾರ್ಡ್ ಮೆಕಾಲೆ ಜ್ಯೋತಿಬಾ ಫುಲೆ !! ಪ !!


-ಪ್ರೊ.ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು

ರಾಗ ಸಂಯೋಜನೆ: ಪಿ. ನೀತೂ ನಿನಾದ್, ಮೈಸೂರು &ಋತ್ವಿಕ್ ಸಿ. ರಾಜ್, ಮೈಸೂರು

ಗಾಯನ: ಋತ್ವಿಕ್ ಸಿ. ರಾಜ್, ಮೈಸೂರು
******

[ವಿಶೇಷ ಸೂಚನೆ: ಕವನದ ಶೀರ್ಷಿಕೆಯ ಮೇಲೆ ಹಾಡಿನ‌ ಆಡಿಯೋ ಇದೆ.‌ ಆಡಿಯೋ ಗುಂಡಿಯನ್ನು ಒತ್ತಿ, ಕವನದ ಸಾಹಿತ್ಯ‌ ಗಮನಿಸುತ್ತಾ ಹಾಡು ಕೇಳಿರಿ. ಆನಂದಿಸಿರಿ.‌]

 

3 thoughts on “ಅನುದಿನ ಕವನ-೭೯೨, ಕವಿ: ಪ್ರೊ.ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು ಕವನದ ಶೀರ್ಷಿಕೆ: ಶಿಕ್ಷಣದ ಶಿಖರಗಳು, ರಾಗ ಸಂಯೋಜನೆ: ಪಿ. ನೀತೂ ನಿನಾದ್, ಮೈಸೂರು & ಋತ್ವಿಕ್ ಸಿ. ರಾಜ್, ಮೈಸೂರು, ಗಾಯನ: ಋತ್ವಿಕ್ ಸಿ. ರಾಜ್, ಮೈಸೂರು

Comments are closed.