ಕೊಪ್ಪಳ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಯಿತ್ರಿ ಶೋಭ ಮಲ್ಕಿಒಡೆಯರ್ ಅವರ ‘ದೃಶ್ಯ ಕಾವ್ಯ’ ಕೃತಿ ಬಿಡುಗಡೆ

ಕುಷ್ಟಗಿ , ಮಾ.5: ತಾಲೂಕಿನ ಹನುಮ‌ಸಾಗರದಲ್ಲಿ ಭಾನುವಾರ ಆರಂಭಗೊಂಡ ಎರಡು ದಿನಗಳ ಕೊಪ್ಪಳ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೂವಿನ ಹಡಗಲಿಯ ಕವಯತ್ರಿ ಶೋಭ ಮಲ್ಕಿಒಡೆಯರ್ ಅವರ “ದೃಶ್ಯ ಕಾವ್ಯ” ಚಿತ್ರ ಕವನ ಸಂಕಲನ ಲೋಕಾರ್ಪಣೆಗೊಂಡಿತು.
ಕೇಂದ್ರ ಕಸಾಪ‌ ಗೌರವ ಕಾರ್ಯದರ್ಶಿ ನೇ. ಬ. ರಾಮಲಿಂಗಶೆಟ್ಟಿ ಅವರು ಕೃತಿ ಬಿಡುಗಡೆ ಮಾಡಿದರು.

ಬೆಳಗಾವಿ ವಿಟಿ ವಿವಿ ಪ್ರೆ. ಕುಲಸಚಿವ ಬಿ. ಇ. ರಂಗಸ್ವಾಮಿ ಅವರು ಸಮ್ಮೇಳನಕ್ಕೆ ಚಾಲನೆ ನೀಡಿದರು.
ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಅಮರೇಗೌಡ ಪಾಟೀಲ‌ ಭಯ್ಯಾಪುರ, ಸಾಹಿತಿ ಪ್ರಕಾಶ್ ಮಲ್ಕಿಒಡೆಯರ್, ಕೊಪ್ಪಳ ಜಿಲ್ಲಾ ‌ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಸೇರಿದಂತೆ ಸ್ಥಳೀಯ, ನಾಡಿನ ಗಣ್ಯರು ಸಾಹಿತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಕುಷ್ಟಗಿ ಪಟ್ಟಣ ಕವಿಯಿತ್ರಿ ಶೋಭ ಮಲ್ಕಿಒಡೆಯರ್ ಅವರ ತವರೂರು ಹೌದು.

ಇದೇ ಸಂದರ್ಭದಲ್ಲಿ ಕುಷ್ಟಗಿ ತಾಲೂಕಿನ ಹಿರೇ ಮನ್ನಾಪೂರ ಹೋಬಳಿ ಘಟಕದ ಅಧ್ಯಕ್ಷ ವಿ ಎಸ್ ಕಾಡಗಿ ಮಠ ದಂಪತಿಗೆ ಶೋಭಾ ದಂಪತಿ ಸನ್ಮಾನಿಸಿ ಗೌರವಿಸಿದರು.


ಶ್ರೀ ಮಾರುತಿ ಬಿನ್ನಾಳ ಮತ್ತು ಸಂಗಡಿಗರಿಂದ ನಾಡಗೀತೆ ಮತ್ತು ರೈತ ಗೀತೆ ಪ್ರಸ್ತುತ ಪಡಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೋಲಿಸ್ ಪಾಟೀಲ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
‌ಕೊಪ್ಪಳ ಜಿಲ್ಲಾ ಕ ಸಾ ಪ ಗೌರವ ಕಾರ್ಯದರ್ಶಿ
ಶೇಖರಗೌಡ ಪೋಲಿಸ್ ಪಾಟೀಲ್ ಇದ್ದರು.


*****