ಅನುದಿನ ಕವನ-೭೯೭, ಕವಿಯಿತ್ರಿ:ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಸಬಲೆ

🍀🌺🍀💐ಕರ್ನಾಟಕ ಕಹಳೆ ಡಾಟ್ ಕಾಮ್ ನ ಎಲ್ಲಾ ಸಹೃದಯ ಓದುಗರಿಗೆ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು🍀🌺🍀💐                                    (ಸಂಪಾದಕರು)

*****

ಸಬಲೆ

ಹೆಣ್ಣು ಅಬಲೆಯಲ್ಲ ಸಬಲೆ
ಅವಳಿಗೂ ಇರಲಿ
ಎಲ್ಲಾ ಕ್ಷೇತ್ರದಲ್ಲೂ ಬೆಲೆ !
ಈ ಪುರುಷ ಪ್ರಧಾನ ಸಮಾಜದಲ್ಲಿ
ಅರ್ಹತೆಗಳಿದ್ದರೂ ಅವಕಾಶ ವಂಚಿತರಾದರು
ಎಷ್ಟೋ ಹೆಂಗಳೆಯರು
ಪ್ರತಿಭೆಯಿದ್ದರೂ ಎಲೆ ಮರೆಯ ಕಾಯಿಯಂತೆ
ಮರೆಯಲ್ಲೇ ಸರಿದರು !
ಪ್ರತಿ ಯಶಸ್ವಿ ಪುರುಷನ ಹಿಂದೆ
ಮಹಿಳೆ ಇರುವಳು ನಿರಂತರ
ಹೆಣ್ಣಿನ ಹಿಂದೆಯೂ ಗಂಡು
ಪ್ರಬಲವಾಗಿ ನಿಂತಾಗ
ಸಾಧಿಸುವಳು ವಿಶೇಷ
ಎಲ್ಲಾ ರಂಗದಲ್ಲೂ, ಎಲ್ಲಾ ಕ್ಷೇತ್ರದಲ್ಲೂ
ಅವಳಿಗೂ ಅವಕಾಶವಿರಲಿ ವೇದಿಕೆ
ಸರಿಸಮಾನವಾಗಿ ಹೆಜ್ಜೆ ಹಾಕುವಳು
ಯಾಕೆ ಹಿಂಜರಿಕೆ ?
ನಿಮ್ಮಗಳ ಬೆಂಬಲವಿರಲು
ಪ್ರಶಸ್ತಿ ಪಡೆದಷ್ಟೇ ಖುಷಿ
ಮನೆಯೊಳಗೆ ಹೇಗೆ ಅಚ್ಚುಕಟ್ಟಾಗಿ
ನಿಭಾಯಿಸುವಳೋ
ಅಷ್ಟೇ ಸಮಾಜವನ್ನು ಸುಧಾರಿಸುವ
ಪ್ರಭುದ್ದತೆ ಇರುವ ಹೆಣ್ಣು
ಸಂಸಾರದ ಬಾಳಿನ ಕಣ್ಣು !
ಅವಳಿರುವೆಡೆ ಸಂತಸ ಸಂಭ್ರಮ
‌‌‌‌‌ ಅನವರತ
ಇನ್ನಾದರೂ ನೀಡಿರಿ ನಿಮ್ಮ ಪ್ರೀತಿಯ ಮತ
ಅವಳ ಭವಿಷ್ಯಕ್ಕೆ ಹಿತ

-ಶೋಭಾ ಮಲ್ಕಿ ಒಡೆಯರ್ 🖊️
ಹೂವಿನ ಹಡಗಲಿ