ಅನುದಿನ ಕವನ-೮೦೧, ಕವಿ:ಸಿದ್ದು ಜನ್ನೂರು, ಚಾಮರಾಜ‌ನಗರ, ಕವನದ ಶೀರ್ಷಿಕೆ: ಧೃವ ಬೆಳಕು

ಧ್ರುವ ಬೆಳಕು…

ಇನ್ನಷ್ಟು ಊರಿಗೆ
ಮತ್ತಷ್ಟು ಕೇರಿಗೆ
ದೇಶದುದ್ದಗಲಕ್ಕೂ ಇನ್ನಷ್ಟು ಹರಡಬೇಕಿತ್ತು
ಈ ಧೃುವ ಬೆಳಕು…

ಬೆಳಗಬೇಕಿತು
ನಳಂದ ಬುದ್ದವಿಹಾರದಿ
ಧೃುವ ನಕ್ಷತ್ರವೊಂದು
ಚೆಲುವ ಚಾಮರಾಜನಗರದ
ಮತ್ತಷ್ಟು ಅಭಿವೃದ್ದಿಯ ನಡುವೆ
ನಿಮ್ಮ ನಡಿಗೆಯ ಬೆಳಕೊಂದು
ಊರೂರಿಗೆ ಫಸರಿಸಿ
ಜನರೇಳಿಗೆಯ ನಡುನಡುವೆ
ಮಿಂಚಿ ನಿತ್ಯ ಮಿನುಗಬೇಕಿತ್ತು
ಈ ಧೃುವ ಬೆಳಕು…

ಈಗಾ ಬೆಳಕು
ಮಾಯವಾಗಿದೆ
ಹಾರಿ ಹೋಗಿದೆ
ಎಲ್ಲರ ತಬ್ಬಲಿ ಮಾಡಿ
ಕತ್ತಲೆಯ ನಡುಬೀದಿಯಲ್ಲಿ
ನೆನಪುಗಳ ಉಳಿಸಿ
ಈ ಧೃುವ ಬೆಳಕು…

ನೊಂದವರ ದನಿಯಾದ
ಈ ಧೃುವ ಬೆಳಕು
ಮತ್ತೆ ಮೂಡುವುದೋ
ಮೂಡಣ ದರ್ಶನದ ನೇಸರನಾಗಿ
ಬಡವರ ಬೆಳಕಿನ ಧೃುವ ಬೆಳಕಾಗಿ…

🙏ಅಂತಿಮ ನಮನಗಳು ಧೃುವ ಸಾಹೇಬ್….🙏


-ಸಿದ್ದುಜನ್ನೂರ್, ಚಾಮರಾಜ ನಗರ
*****