ಅನುದಿನ ಕವನ-೮೦೯, ‘ಅನಾಮಿಕ’ ನ ಐದು ಹನಿಗವಿತೆಗಳು, ಕನ್ನಡಕ್ಕೆ : ಮಂಜುಳ ಕಿರುಗಾವಲು, ಮಂಡ್ಯ

‘ಅನಾಮಿಕ’ ನ ಐದು ಹನಿಗವಿತೆಗಳು


ನಿನ್ನ ಕುರಿತಂತೆ ಅದೆಷ್ಟೋ ಆಕ್ಷೇಪಣೆಗಳಿವೆ; ಹೋಗಲಿ ಬಿಡು.. ನಿನ್ನ ಮೇಲಿನ ಪ್ರೀತಿಗಿಂತ ಅದ್ಯಾವುದು ಹೆಚ್ಚಿನದೇನಲ್ಲ
*****

ನನ್ನ ಅನುಪಸ್ಥಿತಿ
ಬದುಕಿನುದ್ದಕ್ಕೂ
ನಿನ್ನ ಕಾಡಲಿ

ಭಗವಂತ ನಿನ್ನ
ಆಯುವನ್ನು
ಧೀರ್ಘವಾಗಿಸಲಿ
*****

ಎರಡಲ್ಲಿ ಒಂದನ್ನು ಕಳೆದರೆ
ಮತ್ತೊಂದು ಉಳಿಯುತ್ತದೆ…
ಇದು ಗಣಿತದ ಲೆಕ್ಕಾಚಾರ…

ಆದರೆ, ಪ್ರೀತಿಯ ಲೆಕ್ಕಾಚಾರವೇ ಭಿನ್ನ
ಇಲ್ಲಿ ಎರಡಲ್ಲಿ ಒಂದು ಕಳೆದರೆ
ಒಂದೂ ಉಳಿಯುವುದಿಲ್ಲ
*****

ಮುಳುಗಿಸಬಲ್ಲೆಯಾದರೆ
ಮುಳುಗಿಸಿ ನೋಡು;
ನನ್ನ ಮುಳುಗಿಸಲು
ಸಾಗರದಿಂದಲೂ ಸಾಧ್ಯವಾಗಲಿಲ್ಲ..
ನೋಡಿಯೆ ಬಿಡುವೆ ನಿನ್ನ ಕಣ್ಣಿನಾಳ ಅದೆಷ್ಟೆಂದು….!
*****

ಅವನು ಹೇಳಿದ…
ನೀನು, ನಾನು ಹಗಲು, ರಾತ್ರಿ ಇದ್ದಂತೆ;
ಎಂದಿಗೂ ಒಂದಾಗಲು ಸಾಧ್ಯವಿಲ್ಲ…

ನಾನು ಹೇಳಿ ಬಿಟ್ಟೆ
ಸರಿ ಹಾಗಾದರೆ
ನಾನು, ನೀನು ಹಗಲು, ರಾತ್ರಿಯನ್ನು
ಒಂದುಗೂಡಿಸುವ ಸಂಜೆಯಾಗೋಣ

-ಅನಾಮಿಕ


ಕನ್ನಡಕ್ಕೆ : ಮಂಜುಳ ಕಿರುಗಾವಲು, ಮಂಡ್ಯ
*****