ಹಕ್ಕಿ
ಬಾನಲ್ಲಿ ಹಾರುವ ಹಕ್ಕಿಯೆ
ಏನನ್ನು ಅರಸಿ ಹೊರಟಿರುವೆ
ಚಿಂತೆ ಎಂಬ ಸಂತೆಯಲ್ಲಿ
ಸಂತಸದಿ ಸದಾ ಹಾರುತಲಿರುವೆ.
ಅನುಭವಿ ಅಭಿಯಂತರರಿಲ್ಲದೆಯೇ
ಅದ್ಭುತ ಗೂಡು ಕಟ್ಟುವೆ.
ಗೂಗಲ್ ಮ್ಯಾಪ್ ಇಲ್ಲದೆಯೇ
ಗೂಡಿಗೆ ಬಂದು ಸೇರುವೆ.
ಕಲ್ಲು ಮಣ್ಣುಗಳ ಒಳಗೆ
ಕಾಳುಗಳನ್ನಷ್ಟೇ ಹೆಕ್ಕಿ ತೆಗೆಯುವೆ
ಗೂಡಲ್ಲಿ ಕಾಯುವ ಮರಿಗಳಿಗೆ
ಗುಟುಕು ನೀಡಿ ಬದುಕಿಸುವೆ.
ಯಾರಿಗೂ ಹೆದರಿ ನಿಲ್ಲದೆ
ಸ್ವತಂತ್ರ , ಸ್ವಚ್ಛಂದವಾಗಿ ಹಾರುವೆ
ಯಾರ ಕೈಗೂ ಸಿಗದಂತೆ
ಮರದ ತುದಿಯಲ್ಲಿ ನೆಲೆಸಿರುವೆ.
ಹಿಡಿ ದೇಹ ನಿನ್ನದು
ಬಾಳ್ವೆ ನಿನಗಿಂತ ಬಹುದೊಡ್ಡದು
ಕಾಣಲಿಲ್ಲ ನಿನ್ನೊಳಗೆ ಸ್ವಾರ್ಥ
ನಿನ್ನಿಂದಲೇ ನೀತಿಗೂ ಅರ್ಥ.
ಪಾಠ ಕಲಿಯದೇ ನೀಟಾಗಿ
ನಿನ್ನ ಜೀವನ ಸಾಗಿಸುತ್ತಿರುವೆ
ಯಾರು ಹೇಳಿಕೊಟ್ಟವರು ನಿನಗೆ
ನನಗೂ ಸ್ವಲ್ಪ ಹೇಳಬಾರದೆ.
-✍️ ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ
*****