ಅನುದಿನ ಕವನ-೮೩೮, ಕವಿಯಿತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ಆಕ್ರೋಶ

ಆಕ್ರೋಶ

ಮನದೊಳಗಿನ ಬೇಸಿಗೆಗೆ
ಆಕ್ರೋಶದ ಅಗ್ನಿ
ತುಟಿ ಬಿಡುವ ಹಂಬಲವಿದ್ದರೂ
ಬಿಡುತ್ತಿಲ್ಲವಲ್ಲ ಸಂಕೋಲೆಯ
ಹಗ್ಗಗಳು….

ಸುತ್ತಲೂ ಎತ್ತ ಸುತ್ತಿದರೂ
ಗಗನದ ನೀಲಿ ಛಾಯೆಗೆ
ಬಾಯಾರಿಕೆಯಾಗಿ ಆಯಾಸಗೊಂಡಿದೆ…..

ಬಡತನದ ಬವಣೆಗೆ
ಶ್ರೀಮಂತರ ಹುಸಿ ಆಶ್ವಾಸನೆ
ನಕ್ಕು ವ್ಯಂಗ್ಯ ಹೊರಸೂಸುತಿದೆ….

ಹಸಿದ ಹೊಟ್ಟೆಗೆ
ಕೊಡಲಿಯ ಉಳಿ ಪೆಟ್ಟು,
ಹೊಡೆತ ತಿಂದ ಬಡವನಿಗೆ
ಇನ್ನೂ ಸಿಗದ ಕೈ ತುತ್ತು….

ತುತ್ತು ರೊಟ್ಟಿಗೆ
ವರ್ಷಗಟ್ಟಲೇ ಕಾರ್ಖಾನೆಗಳಲ್ಲಿ
ದುಡಿದ ಎಷ್ಟೋ
ಎಡ, ಬಲಗೈಗಳು
ನೋವಿಗೆ ನೊಂದು
ಮುಗಿಲಿನತ್ತ ತೇಲುವ ಕನಸು
ಆ ಕನಸ ಆಶಾಕಿರಣಕೆ
ಸಮಾಜದ ಸ್ತಭ್ದ ಧ್ವನಿ….

ಬವಣೆಯ ಕಣ್ಣಲ್ಲಿ ಆಕ್ರೋಶದ ಸಿಡಿಲು ಸಿಡಿಲಿನತ್ತ ಸಾಗುತಿದೆ..

ದಿಗಿಲು ಬಡಿದ ಬಡ ಮನಕೆ
ಸಿಗದ ಬೆಂಗಾವಲು,
ಮನಸ್ಸ ಕಡುಗೋಲು
ಒಂದು ಕಡೆಯಿಂದ
ಮತ್ತೊಂದು ಕಡೆಗೆ ಎಡ ಬಿಡದೆ
ಕಟಿದಿದೆ……


-ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ
******