ಅನುದಿನ ಕವನ- ೮೩೯, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ, ಕವನದ ಶೀರ್ಷಿಕೆ: ಜೈಭೀಮ್

ಜೈಭೀಮ್….

ಕಣ್ಣ ಮುಂದಿದೆ
ನೀವೆ ತೋರಿದ ಹೆದ್ದಾರಿಯು
ಸಾಗಬೇಕಿದೆ
ಬಹುಜನರೆಲ್ಲರು ಒಂದುಗೂಡಿಯು
ನಿಮ್ಮಿಂದ ಸಿಕ್ಕಿದೆ ನಮಗೆ ಎಲ್ಲಹಕ್ಕು
ಕೈ ಹಿಡಿದು ನಡೆಸಿದೆ ನೀ ಬೌದ್ಧಬಿಕ್ಕು
ಜೈಭೀಮ ಮಹಾರಾಜ ಈ ದೇಶಕೆ ಬೆಳಕಿನ ತೇಜ ನೀವೆ
ನಮ್ಮನ್ನ ಕಾಯುವ ಈ ದೇಶದ ನಿರ್ಮಾತೃ ನೀವೆ
ಜೈಭೀಮ್ ಜೈಭೀಮ್ ಜೈಭೀಮ್….

ನೊಂದವರ ಕಣ್ಣೀರ ಹೊರೆಸಲು ಪಣತೊಟ್ಟವ
ಹಕ್ಕು ಅಧಿಕಾರ ಕೊಡಿಸಲು ಛಲತೊಟ್ಟವ
ಜ್ಞಾನವಿಜ್ಞಾನಕ್ಕೆ ತಾ ಮುಂದು
ಯಾರಿಗೂ ಹೆದರದ ಗುಂಡಿಗೆ ನಿಮ್ದು
ಹಗಲಿರುಳು ದುಡಿದೆ ನೀ ನಮಗೆಂದು
ನಿಮಗೆ ಶಿರಬಾಗಿ ನಮಿಸುವೆವು ನಾವೆಂದು
ಭಾರತದ ಭವ್ಯಮೂರ್ತಿ ನೀವೆ
ಭಾರತಕ್ಕೆ ನಿಮ್ಮಿಂದಾನೆ ಕೀರ್ತಿ…

ತನ್ನ ದೇಶದ ತನ್ನ ಜನರ ಅಪಾರವಾಗಿ ಪ್ರೀತಿಸುವ
ಒಬ್ಬನೆ ಒಬ್ಬ ನಮ್ಮ ನೆರಳಾಗಿ ನಿಂತ ದಾನವ
ಹಸಿವ ನೀಗಿಸಿ ಕೈ ತುತ್ತೆ ಆದವ
ಮೀಸಲು ಕೊಡಿಸಿ ಬೆಳಕೆ ಆದವ
ನೆಲಜಲ ರಕ್ಷಣೆ ಜನಮನ ಜೀವಪ್ರಾಣ ರಕ್ಷಣೆ
ಬಯಸಿದೆ ಎಲ್ಲರೇಳಿಗೆ ಮಾಡುತಾ ಭೀಮಘರ್ಜನೆ
ಭಾರತ ಭಾಗ್ಯವಿಧಾತನೆ
ನಮ್ಮಯ ಎಂದಿಗೂ ಕಾಯುವ ದೇವನೆ….


-ಸಿದ್ದುಜನ್ನೂರ್, ಚಾಮರಾಜ ನಗರ
*****