1. ಅವನೊಬ್ಬ ಪ್ರಸಿದ್ಧ ಕುಂಚ ಕಲಾವಿದ. ಒಬ್ಬ ಸುಂದರಿಯನ್ನು ಕ್ಯಾನ್ವಾಸ್ ಮೇಲೆ ಚಿತ್ರಿಸಿದ. ಕ್ಯಾನ್ವಾಸ್ ನಿಂದ ಹೊರಬಂದ ಅವಳು ಕಲಾವಿದನನ್ನು ಮದುವೆಯಾದಳು. ಈಗ ಕಲಾವಿದನಿಗೆ ಬೇರೆ ಸುಂದರಿಯನ್ನು ಚಿತ್ರಿಸಲು ಅವಕಾಶ ನೀಡಲಾಗಿಲ್ಲ. (ಈಕ್ವೆಡಾರ್ ಕತೆ)
2. ಅವನೊಬ್ಬ ಡೇನಿಷ್ ವ್ಯಕ್ತಿ. ಸಿಗರೇಟ್ ಸೇದುವದನ್ನು ಹೇಗೆ ಬಿಡಬೇಕೆಂಬುದನ್ನು ಚೆನ್ನಾಗಿ ಬಲ್ಲವನಾಗಿದ್ದ. ಅವನು ಅದನ್ನು ಸಾಧಿಸಿದ, ಹಲವಾರು ಸಲ. (ಸ್ವೀಡನ್ ಕತೆ)
3. ಪ್ಯಾಕೆಟ್ ನಲ್ಲಿನ ಚಿಪ್ಸ್ ಗಳನ್ನು ತಿನ್ನುತ್ತಿದ್ದ ಹಸಿದ ವ್ಯಕ್ತಿಗೆ ಶ್ರೀಮಂತನೊಬ್ಬ ಹೇಳಿದ, ” ಅಂತಹ ಆಹಾರವನ್ನು ತಿನ್ನುವುದನ್ನು ಬಿಡು, ಅದು ನಿನ್ನ ಆರೋಗ್ಯವನ್ನೇ ಹಾಳು ಮಾಡುತ್ತದೆ” ಎಂದು. ಕಳೆದ ಒಂದು ವಾರದಿಂದ ಉಪವಾಸವಿದ್ದ ಆ ಹಸಿದವನಿಗೆ ಶ್ರೀಮಂತನ ಮಾತುಗಳು ಕೇಳಿಸಲೇ ಇಲ್ಲ ! (ಪೋರ್ಚುಗಲ್ ಕತೆ)
4. ಅವಳೊಂದು ಹಳೆಯ ಬಾಗಿಲ ಹಿಂದೆ ನಿಂತಿದ್ದಳು. ಬಾಗಿಲಾಚೆ ವಿಶಾಲವಾದ ಬಯಲು ಪ್ರದೇಶ. ಬಾಗಿಲ ಕೀಲಿಯ ಕಿಂಡಿಯಿಂದ ಇಣುಕಿ ನೋಡಿದಳು, ಆಚೆ ಕಡೆಯಿಂದ ಕಿಂಡಿಯಲ್ಲಿ ಯಾರೋ ಅವಳನ್ನೇ ನೋಡುತ್ತಿದ್ದರು. (ಕೆನಡಾ ಕತೆ)
ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ
*****