ಬಳ್ಳಾರಿ ಜ್ಞಾನಾಮೃತ ಪಿಯು ಕಾಲೇಜಿನ ರಶ್ಮಿಗೆ 12ನೇ ರ್ಯಾಂಕ್: ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಶೇ. 100 ರಷ್ಟು ಸಾಧನೆ

ಬಳ್ಳಾರಿ, ಏ. 21: ನಗರದ ಮರ್ಚೇಡ್ ಟ್ರಸ್ಟ್ ನ ಜ್ಞಾನಾಮೃತ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ರಶ್ಮಿ 584 ಅಂಕಗಳನ್ನು ಪಡೆದು ರಾಜ್ಯಕ್ಕೆ 12ನೇ ರ್ಯಾಂಕ್ ಪಡೆದಿದ್ದು, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ. 100 ರಷ್ಟು ಫಲಿತಾಂಶ ಬಂದಿದೆ.


ಜ್ಞಾನಾಮೃತ ಪಿಯು ಕಾಲೇಜಿನ ಪ್ರಾಂಶುಪಾಲ ಯಶವಂತ ಶೆಟ್ಟಿ ಅವರು ಈ ಮಾಹಿತಿ ನೀಡಿದ್ದು, ವಿಜ್ಞಾನ ವಿಭಾಗದ ವಿದ್ಯಾರ್ಥಿ ವೈ. ಸಾಯಿ ಸರ್ವೇಶ್‍ರೆಡ್ಡಿ 572 ಮತ್ತು ಜೆ. ನೀಲಾವತಿ 572 ಅಂಕಗಳನ್ನು ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ 31 ವಿದ್ಯಾರ್ಥಿಗಳು, 65 ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಅಲ್ಲದೇ, ವಾಣಿಜ್ಯ ವಿಭಾಗದಲ್ಲಿ ಶೇ. 100 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಎಂದು ಅವರು ವಿವರಿಸಿದ್ದಾರೆ.


ಸತತ ಮೂರು ವರ್ಷಗಳಿಂದ ಜ್ಞಾನಾಮೃತ ಕಾಲೇಜಿನ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಶೇ.100 ರಷ್ಟು ತೇರ್ಗಡೆ ಆಗುವ ಮೂಲಕ ಸಂಸ್ಥೆಯ ಗೌರವ ಮತ್ತು ಕೀರ್ತಿಯನ್ನು ಹೆಚ್ಚಿಸಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.

ಅಭಿನಂದನೆ: ಜ್ಞಾನಾಮೃತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ಮರ್ಚೇಡ್ ಟ್ರಸ್ಟ್ ನ ಅಧ್ಯಕ್ಷ ಇಂ. ಎಂ. ಜಿ ಗೌಡ ಮತ್ತು ಕಾರ್ಯದರ್ಶಿ ಡಾ. ಎಂ. ಸಿ ಗೌಡ ಅವರು ಅಭಿನಂದಿಸಿದ್ದಾರೆ.

*****