ಕವಿ ಪರಿಚಯ: 1970 ಜುಲೈ 22 ರಂದು ಜನಿಸಿರುವ ಮಾಣಿಕ ನೇಳಗಿ ತಾಳಮಡಗಿ ಅವರಿಗೆ ಸಾಹಿತ್ಯದ ಗೀಳು 1990ರಿಂದ ಅಂಟಿಕೊಂಡಿದೆ.
ಕವನದ ಜತೆ ಕತೆ,ಚಿಂತನ,ಲೇಖನ ಬರೆಯುವ ಹವ್ಯಾಸವಿದ್ದು ಸಾಕಷ್ಟು ಕವನ ,ಚಿಂತನಗಳು ಕಲಬುರಗಿಯ ಆಕಾಶವಾಣಿ ಕೇಂದ್ರದಿಂದ ಬಿತ್ತರಗೊಂಡಿವೆ,
ಖಜಾನೆ ಅಧಿಕಾರಿಯಾಗಿರುವ ಮಾಣಿಕ ನೇಳಗಿ ತಾಳಮಡಗಿ ಅವರು ಪ್ರಸ್ತುತ ಬೀದರ ಜಿಲ್ಲೆಯ ಭಾಲ್ಕಿ ಖಜಾನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾಡೆಮ್ಮ ಬಂಧು
ಬಣ್ಣ ಬಣ್ಣದ ಹೂವುಗಳಿಂದ
ಹೆಚ್ಚಿಹುದು ಕಾನನದ ಅಂದ
ಹಸಿರಿನ ಸಿರಿ ನೋಡಲು ಚೆಂದ
ತುಳುಕಿದೆ ಕಾಡಿದು ಹಣ್ಣಿಂದ
ಕರೆದಿದೆ ತೊರೆಗಳಿಗೆ ಒಲವಿಂದ
ತೀಡಿದೆ ಖಗ ಮಿಗಗಳಿಗೆ ಗಂಧ
ಉಲ್ಲಾಸಿತವಾಗಿದೆ ಸಂಗೀತದಿಂದ
ನಗುತಿದೆ ನವಿಲಿನ ನರ್ತನದಿಂದ
ಕಟ್ಟಿವೆ ಪಕ್ಷಿಗಳು ಒಲವಿನ ಗೂಡು
ಉಲಿದಿವೆ ಮರಿಗಳು ಪ್ರೀತಿಯ ಹಾಡು
ಕರುಣೆಯ ಹೊತ್ತ ಚೆಂದನದ ಬೀಡು
ಔಷಧಗಳ ಆಗರ ಕಾಡು ಮೇಡು
ನಗುತಿರಲಿ ಹೊನ್ನ ಸಿರಿ ಎಂದೆಂದು
ನಮ್ಮಯ ಉಸಿರು ಇಂದು ಮುಂದು
ಕಾಪಾಡಿ ಕಾಡು ಆಗಿದೆಮಗೆ ಬಂಧು
ಸಂಜೀವಿನಿಯೇ ಆಗಿದೆ ನಮಗಿಂದು
-ಮಾಣಿಕ ನೇಳಗಿ ತಾಳಮಡಗಿ, ಬೀದರ್ *****