ಬೆಳದಿಂಗಳು ಸುಡೋವಂಗಾ
ನೋಡಬ್ಯಾಡವೇ ಹುಚ್ಚೀ;
ದಯಿ ಇರ್ಲಿ ಒಂದಷ್ಟು…
ನಕ್ಷತ್ರಗಳು ನೆಟೆ ಬೀಳುವಂಗಾ
ನಗಬ್ಯಾಡವೇ ಹುಚ್ಚೀ;
ದಯಿ ಇರ್ಲಿ ಒಂದಷ್ಟು…
ತಂಗಾಳಿ ತಿಣುಕವಂಗಾ
ಬಳುಕಬ್ಯಾಡವೇ ಹುಚ್ಚೀ;
ದಯಿ ಇರ್ಲಿ ಒಂದಷ್ಟು…
ಹೂಗಳು ಅಮಲೇರುವಂಗಾ
ಉಸುರಾಡಬ್ಯಾಡವೇ ಹುಚ್ಚೀ;
ದಯಿ ಇರ್ಲಿ ಒಂದಷ್ಟು…
ನಾನೇ ಕಳದುಹೋಗುವಂಗಾ
ಪ್ರೇಮಿಸಬೇಡವೇ ಹುಚ್ಚೀ;
ದಯಿ ಇರ್ಲಿ ಒಂದಷ್ಟು.
-ಲೈನ್ಮನ್ ರಾಮಣ್ಣ, ಕೊಟ್ಟೂರು
*****