ಅಮ್ಮನೆಂದರೆ…
ಅಮ್ಮನೇ ಹಾಗೆ ತನಗಿಂತ
ತನ್ನವರಿಗಾಗಿ ದುಡಿದು ದಣಿದವಳು
ಪತಿ ಮಕ್ಕಳು ಮೊಮ್ಮಕ್ಕಳ
ನಗುವಿನಲ್ಲೇ ನೆಮ್ಮದಿ ಕಂಡವಳು
ಅಮ್ಮ ಮನೆಯ ಕನ್ನಡಿ
ಬಾಳ ಬಿಸಿಲ ಸಹಿಸಿ
ಮನೆ ಮನಕೆಲ್ಲಾ ಬೆಳಕ
ಪ್ರತಿಫಲಿಸಿದವಳು
ಅಮ್ಮ ನೆಲದೊಳಗಿನ ನಿಧಾನ
ಒಡಲ ಬಗೆದಷ್ಟು ವಾತ್ಸಲ್ಯದ ಹಸಿ
ಬೆವರ ಬಸಿದು ಮಕ್ಕಳ
ಬಾಳಿಗೆ ಹೊನ್ನ ಕಿರೀಟವಾದವಳು
ಅಮ್ಮ ಹೋದಳು ತೀರಿ
ಬಿರುಕಾಯಿತು ಮನೆಯ ಗೋಡೆ
ಪಾತ್ರೆ ಪಡುಗ ಧೂಳು ಹಿಡಿದವು
ಅಮ್ಮನ ಪೋಟೋ ಸಹಿತ
ಅಮ್ಮಬರಿ ಪದವಲ್ಲ
ಬದುಕು ಬೆಳಗುವ ಬೆಳಕು
-ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ.