ನಾನು ನೋಡಿದ ಚಿತ್ರ:ಡೇರ್ ಡೆವಿಲ್ ಮುಸ್ತಾಫಾ’ ಬರಹ: ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ, ಬೆಂಗಳೂರು

ಶುಕ್ರವಾರ ಬಿಡುಗಡೆಯಾಗಿರುವ ‘ಡೇರ್ ಡೆವಿಲ್ ಮುಸ್ತಾಫಾ’ ಕನ್ನಡದ ಹೊಸ ಸಿನಿಮಾ. ಅತ್ಯದ್ಭುತ ಸಿನಿಮಾ. ಅಷ್ಟೇ ಅಲ್ಲ, ಅದೊಂದು ದೃಶ್ಯಕಾವ್ಯ.‌. ಪ್ರತಿ ಫ್ರೇಮ್ ಕೂಡ ರೋಮಾಂಚಕಾರಿ.

ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಡೇರ್ ಡೆವಿಲ್ ಮುಸ್ತಫಾ’ ಕಥೆ ಆಧಾರಿತ ಸಿನಿಮಾ ಇದು. ನಮ್ಮ ಸಂವಿಧಾನದ ಪೀಠಿಕೆಯಲ್ಲಿರುವ ‘ಸರ್ವ ಧರ್ಮ ಸಮಭಾವದ’ ದ ಆಶಯಕ್ಕೆ ಇಂಬು ಕೊಡುವ ಚಿತ್ರವಿದು.

ತೇಜಸ್ವಿಯವರ ಸಾಹಿತ್ಯ ಸಮೃದ್ಧ ಸಾಹಿತ್ಯ. ಅವರ ಅಭಿಮಾನಿ ಬಳಗದಲ್ಲಿ ಕೋಟ್ಯಾಂತರ ಕನ್ನಡಿಗರಿದ್ದಾರೆ.
‘ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾ ವೀಕ್ಷಣೆಯ ನಂತರ ತೇಜಸ್ವಿಯವರ ಅಭಿಮಾನಿ ಬಳಗವು ದುಪ್ಪಟ್ಟಾಗುವುದು ಖಡಾಖಂಡಿತ. ಅಷ್ಷರ ಮಟ್ಟಿಗೆ ಈ ಸಿನಿಮಾ ನಮ್ಮ ಮನಸ್ಸನ್ನು ಆಕ್ರಮಿಸಿಕೊಳ್ಳುತ್ತದೆ.

ಅಬ್ಬಾ ! ಪ್ರತಿಯೊಬ್ಬ ನಟನ ಅಭಿನಯವೂ ರೋಮಾಂಚಕ. ನಿರ್ದೇಶಕ ಶಶಾಂಕ್ ಸೋಗಲ್ ಪಾತ್ರಧಾರಿಗಳ ಆಯ್ಕೆಯನ್ನು ಸೊಗಸಾಗಿ ಮಾಡಿದ್ದಾರೆ. ಅವರಿಗೊಂದು ಸಲಾಂ.

ಡೇರ್ ಡೆವಿಲ್ ನಿರ್ದೇಶನ, ಡೇರ್ ಡೆವಿಲ್ ಡೈಲಾಗ್,
ಡೇರ್ ಡೆವಿಲ್ ಅಭಿನಯ,
ಡೇರ್ ಡೆವಿಲ್ ಫೋಟೋಗ್ರಫಿ,
ಡೇರ್ ಡೆವಿಲ್ ಸಿನಿಮಾದ ಓಟ,
ಡೇರ್ ಡೆವಿಲ್ ಕ್ರಿಕೆಟ್ ಆಟ,
ಡೇರ್ ಡೆವಿಲಾ ಶಬ್ದಗ್ರಹಣ,
ಡೇರ್ ಡೆವಿಲ್ ನಿರೂಪಣೆ,
ಡೇರ್ ಡೆವಿಲ್ ಸಾಂಗ್,
ಡೇರ್ ಡೆವಿಲ್ ಅಣ್ಣಾವ್ರ ಅನಿಮೇಷನ್,
ಡೇರ್ ಡೆವಿಲ್ ಮನರಂಜನೆ.
ಎಲ್ಲವೂ ಡೇರ್ ಡೇವಿಲ್ ಅಡಕದ ‘ಡೇರ್ ಡೆವಿಲ್ ಮುಸ್ತಾಫ’

ಡೇರ್ ಡೆವಿಲ್ ಸಾಂಗ್ ಯಾವುದು ಅಂದುಕೊಂಡಿರಾ? ಎಲ್ಲೋ ಕೇಳಿರಬಹುದು ಗಮನಿಸಿ. ಅದೇ ಹಾಡು. ರಂಗದ ಮೇಲೆ ರಂಜಿಸಿದ್ದು, ಈಗ ತೆರೆಯ ಮೇಲೆ ಬಂದಿದೆ. ಆ ಹಾಡು – “ಮೈಸೂರು ರಾಜ್ಯದ ದೊರೆಯೆ, ರಣದೀರ ನಾಯ್ಕನೇ, ನಿನ್ನಂತ ರಾಜನಿಲ್ವಲ್ಲೋ ಲೋಕದ ಮ್ಯಾಲೆ, ನಿನ್ನಂತ ರಾಜನಿಲ್ವಲ್ಲೋ ಲೋಕದ ಮೇಲೆ” .. ಈ ರಸಭರಿತ ಹಾಡು, ಹಾಡಿನ ಮಧ್ಯೆ ಡಾ.‌ರಾಜಕುಮಾರ್ ಅವರ ಅನಿಮೇಟೆಡ್ ರೇಖಾಚಿತ್ರವನ್ನು ಮನೆಮಂದಿಯೆಲ್ಲಾ ನೋಡಿ ಖುಷಿಪಡಲೇಬೇಕು,‌ ಮುಖಭಾವವನ್ನು ಸವಿಯಬೇಕು, ಹಾಡು ಗುನುಗಬೇಕು, ಪಡ್ಡೆ ಹೈಕಳು, ಕಾಲೇಜ್ ವಿದ್ಯಾರ್ಥಿಗಳು, ಮಕ್ಕಳು ಎಲ್ಲಾ ಹಾಡಿಕೊಳ್ಳಬೇಕು, ಮತ್ತೊಮ್ಮೆ ಸಿನಿಮಾ ಥಿಯೇಟರ್ ನತ್ತ ಧಾವಿಸಬೇಕು.

 

‘ಡೇರ್ ಡೆವಿಲ್ ಮುಸ್ತಫಾ’ ಮನಸ್ಸುಗಳನ್ನು ಬೆಸೆಯುವ ಸಿನಿಮಾ. ಇಂತಹ ಒಂದೊಳ್ಳೆಯ ಸಿನಿಮಾದ ಸೌಂದರ್ಯವನ್ನು surround sound effect ನಲ್ಲಿ ಥಿಯೇಟರ್ ನಲ್ಲಿ ನೋಡಿಯೇ ಮನದುಂಬಿಕೊಳ್ಳಬೇಕು. ಹೊರಡಿ ಚಿತ್ರಮಂದಿರದತ್ತ. ‘ಡೇರ್ ಡೆವಿಲ್ ಮುಸ್ತಫಾ’ ಬಹುಕಾಲ ನಮ್ಮ ಮನಸ್ಸಿನಲ್ಲಿ ಉಳಿಯುವ ಸಿನಿಮಾವಿದು!

ಶಿಶಿರ್ ಬೈಕಾಡಿ, ಆದಿತ್ಯ ಅಶ್ರೀ,
ಶಂಕ್ರ, ಸೀನ, ಪಿಟಿ ಮೇಸ್ಟ್ರು ವಿಜಯ್ ಶೋಭರಾಜ್ ಪವೂರ್, ಓಎಸ್‌ಕೆ ಟೀಚರ್, ಪ್ರಿನ್ಸಿಪಾಲ್ ಮಂಡ್ಯ ರಮೇಶ್, ರಮಾಮಣಿ, ಉಸ್ಮಾನ್ ಆಗಿ ಪೂರ್ಣ ಚಂದ್ರ ಮೈಸೂರ್ … ಹೀಗೆ ಎಲ್ಲರ ಅಭಿನಯ ಸೂಪರ್ರೋ ಸೂಪರ್. ಡಾಲಿ ಧನಂಜಯ್, ಪ್ರಯಾಗ್ ಅವರು ತೆರೆಯ ಹಿಂದಿನ ಪ್ರವರ್ತಕರು.

ಲೇಖಕರಾದ ತೇಜಸ್ವಿಯವರ Fans Funded Movie, First of its kind in the entire world. Woh ! Inspiring.

ಗೆಲ್ಲಲೇಬೇಕಾದ ಸಿನಿಮಾ ಇದು, ದಯವಿಟ್ಟು ಮನೆಮಂದಿಯೆಲ್ಲಾ  ಕುಳಿತು ನೋಡಬಹುದಾದ ಚಿತ್ರವಾದ ಡೇರ್ ಡೆವಿಲ್ ಮುಸ್ತಫಾನನ್ನು ಗೆಲ್ಲಿಸೋಣ. ಸರ್ವ ಜನಾಂಗದ ಶಾಂತಿಯ ತೋಟವನ್ನು ಕಾಪಿಟ್ಟುಕೊಳ್ಳೋಣ.

-ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ , ಬೆಂಗಳೂರು                                                        🩷❤️🧡💛💚🩵💙💜🩶🤍🤎