ಅನುದಿನ ಕವನ-೮೬೯, ಕವಿ: ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ(ರಾಯಚೂರು ಜಿಲ್ಲೆ), ಕವನದ ಶೀರ್ಷಿಕೆ: ಊಟ

ಊಟ

ಊಟವಿಲ್ಲದೆ ನಡೆಯದು
ಜೀವದ ಆಟ
ಅನ್ನಕ್ಕಾಗಿ ಮನುಜನದು
ನಿತ್ಯದ ಹೋರಾಟ.

ಮೃಷ್ಟಾನ್ನ ಭೋಜನ
ಕೆಲವರಿಗೆ ಉಂಟು
ತುತ್ತು ಸಿಗದೇ
ದಿನ ದೂಡುವವರುಂಟು.

ಬಲು ಇಷ್ಟ ತಿನ್ನಲು
ಸಂಪಾದನೆಯದು ಕಷ್ಟ
ದುಡಿಮೆಯ ಫಲ ತಿನ್ನಲು
ದೇಹಕೆ ಸೇರುವುದು ಸ್ಪಷ್ಟ .

ಹಳಸಲು ಅಮೃತ
ಹಸಿದವರ ಹೊಟ್ಟೆಗೆ
ತಾತ್ಸಾರದ ಭಾವ
ಕೊಬ್ಬಿದ ಕುನ್ನಿಗಳಿಗೆ.

ಅನ್ನದ ಮೇಲೆ
ಅಹಂಕಾರ ಬೇಡ
ಅನ್ನವೇ ದೇವರು
ಜೀವ ಸಂಕುಲಕ್ಕೆಲ್ಲ

✍️ ಡಾ. ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ