ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಳೆದ ಮೂರು ವರ್ಷಗಳಿಂದ ಪದವಿ, ಸ್ನಾತಕೋತ್ತರ ಪದವಿ ಒಳಗೊಂಡಂತೆ ಎಲ್ಲಾ ಬಗೆಯ ಪ.ಜಾತಿ/ಪಂಗಡ/ಹಿಂದುಳಿದ ವರ್ಗದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಸಕಾಲದಲ್ಲಿ ಬಿಡುಗಡೆ ಮಾಡದೆ ಗೊಂದಲ ಸೃಷ್ಟಿಸಿ ತಡೆಹಿಡಿಯಲಾಗಿತ್ತು. ಇದರಿಂದಾಗಿ ಕಾಲೇಜುಗಳಲ್ಲಿ ಮುಂಚಿತವಾಗಿ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯಿರಿ ಎಂದು ವಿದ್ಯಾರ್ಥಿಗಳನ್ನು ಒತ್ತಾಯಿಸಲಾಗಿತ್ತು. ಮೇರಿಟ್ ಇದ್ದರೂ ಬರಿ ಶುಲ್ಕ ಪಾವತಿಸಲಾಗದ ಕಾರಣಕ್ಕೆ ಕಳೆದ ವರ್ಷ ಅನೇಕ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಂದ ಹೊರಗುಳಿದದ್ದನ್ನು ಕಣ್ಣಾರೆ ಕಂಡು ತೀವ್ರವಾಗಿ ನೊಂದಿದ್ದೇನು.
ಮೈಸೂರಿನಲ್ಲಿ ಮೊದಲಬಾರಿಗೆ ಪತ್ರಿಕಾಗೋಷ್ಠಿ ನಡೆಸಿದ ಸಮಾಜ ಕಲ್ಯಾಣ ಇಲಾಖೆ ಸಚಿವರ ಡಾ. ಮಹಾದೇವಪ್ಪ ಅವರು “ಕೇವಲ ಶುಲ್ಕ ಪಾವತಿಸಲು ಆಗುವುದಿಲ್ಲ ಎಂಬ ಕಾರಣಕ್ಕೆ ಯಾವೊಬ್ಬ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತನಾಗಬಾರದು” ಆದ್ಯತೆಯ ಮೇರೆಗೆ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡಲಾಗುವುದು. ಹಾಗೂ ತಾಂತ್ರಿಕ ಸಮಸ್ಯೆಯನ್ನು ಶೀಘ್ರ ಬಗೆಹರಿಸಿ ಎಂದು ತಮ್ಮ ಇಲಾಖೆಯ ಮೇಲಾಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿರುವುದನ್ನು ಸ್ವಾಗತಿಸುತ್ತೇನೆ.
ಈ ಕಾರಣಕ್ಕೆ ಇರಬೇಕು ಬಾಬಾ ಸಾಹೇಬ್ ಡಾ. ಬಿ ಆರ್. ಅಂಬೇಡ್ಕರ್ ಅವರು ‘ರಾಜಕೀಯ ಅಧಿಕಾರ ಯಾವಾಗಲು ಸಾಮಾಜಿಕವಾಗಿ ಶೋಷಣೆಗೆ ಒಳಗಾದವರಿಗೆ ಸಿಗಬೇಕು’ ಎಂದೇಳಿದ್ದು. ಈ ಮಾತು ಇಂದು ನಿಜ ಅನಿಸಿತು.
-ನಾಗರಾಜ ತುಮಕೂರು, ಲೇಖಕರು, ಬಾಗಲಕೋಟೆ
*****