ಅನುದಿನ ಕವನ-೮೮೨, ಕವಿಯಿತ್ರಿ: ದಾಕ್ಷಾಯಿಣಿ ಶಂಕರ್, ಮಹಾಲಿಂಗಪುರ

ಬದುಕನ್ನು ಮತ್ತಷ್ಟು ಆಸ್ವಾದಿಸಲು
ತೀರದಡಿಯಲಿ ನಿಂತುಕೊಂಡಿದ್ದೆ
ಎಲ್ಲವೂ ಕೊಚ್ಚಿಕೊಂಡು ಹೋಗಿತ್ತು….

ಜೀವನವನ್ನು ಹಿಂತಿರುಗಿ ನೋಡುತ್ತಾ
ಕೆಲವು ಸಮಯ ಕಳೆದು ಹೋಗಿದ್ದೆ
ಕಣ್ಣುಗಳೆಲ್ಲಾ ತಂತಾನೇ ತೇವವಾಗಿದ್ದವು…

ನಾವು ಕಂಡುಂಡ ನೋವುಗಳನ್ನೆಲ್ಲಾ
ಲೆಕ್ಕ ಹಾಕುತ್ತಾ ಕುಳಿತಿದ್ದೆ
ಚುಕ್ಕಿಗಳಂತೆ ಲೆಕ್ಕವೇ ಸಿಗುತ್ತಿಲ್ಲಾ…

ನೀನು ಕೊಟ್ಟಿರುವ ಪ್ರೀತಿಯನ್ನೆಲ್ಲಾ
ಕವಿತೆಯಾಗಿಸಲು ಪ್ರಾರಂಭಿಸಿದೆ
ಪೆನ್ನು ,ಹಾಳೆಗಳೇ ಸಾಲುತ್ತಿಲ್ಲಾ….


-ದಾಕ್ಷಾಯಣಿ ಶಂಕರ್, ಮಹಾಲಿಂಗಪುರ                        *****