ಅನುದಿನ ಕವನ-೮೮೫, ಯುವ ಕವಿ: ವಿಶಾಲ್ ಮ್ಯಾಸರ್, ಹೊಸಪೇಟೆ

ಪಕ್ಕೆಲುಬ ಕಟ್ಟು ಬಿಚ್ಚಿ
ರೆಕ್ಕೆಮೂಡಿ ಹಾರುವ ಕಾಲಬಂತು

ಬಾಯ ಮುಸುಕ ಹರಿದು
ದನಿ ಹುಟ್ಟಿ ಹಾಡುವ ಕಾಲಬಂತು

ಮುದ್ದೆಗೆ ಮೂಗು ಮೂಡಿ
ಹೂವ ಮೂಸುವ ಕಾಲಬಂತು

ಬರುಡೆದೆಗೆ ಮೊಲೆ ತುಂಬಿ
ಹಾಲು ಉಣಿಸುವ ಕಾಲಬಂತು

ಕೈ ಕಾಲು ಬಂತು
ಅಡ್ಡಾಡಿ ಚಿತ್ರ ಚಿಗುರಿಸಿ
ಕವಿತೆ ಬರೆಯುವ ಕಾಲಬಂತು


-ವಿಶಾಲ್ ಮ್ಯಾಸರ್, ಹೊಸಪೇಟೆ
*****