ಕಾಯವ ಕಾಯದ ಕಾಯಕ
ವೃತ್ತಿ ಯಾವುದಾದರೇನು
ನಿಷ್ಟೆಯಿಂದ ಇರುನೀನು
ಯಾರು ಮೆಚ್ಚದಿದ್ಸರೇನು
ಅತ್ಮತೃಪ್ತಿ ಇಲ್ಲವೆನು
ಬೆಂದ ಇಂದುಗಳ ನಡುವೆ
ನಾಳೆಗಳ ಹುಡುಕದೇನು
ಎಲ್ಲೋ ಬಿದ್ದ ಕಬ್ಬಿಣಕೆ ಅಂದದ
ಅಕಾರವಿಟ್ಟ ಕಮ್ಮಾರ
ತನ್ನ ಬದುಕನೇ ತಿದ್ದಲಾರದಾದ
ಸತ್ತೋದ ತೊಗಲಿನಿಂದ
ಚೆಂದದ ಚಪ್ಪಲಿಯ ಕೊಟ್ಟ
ಚಮ್ಮಾರ ತನ್ನ ಚರ್ಮದ ಸುಕ್ಕ ಮರೆಸದಾದ
ಅಲ್ಲೊಬ್ಬ ಯೋಗಿ
ಮುಗಿಲ ಬಸಿರಿನ ನಡುವೆ
ಕನಸುಗಳ ಹುಡುಕುತಾ
ನಾಳೆಗಳಿಗೆ ಅನ್ನವ ಅಳೆಯುತಿಹನು
ಬಿದ್ದ ಮಳೆಯನಿಗಳಲಿ
ಮುತುಗಳ ರಾಸಿಯನು ಹುಡುಕತಿಹನು
ಯಾರು ಬಂದರೆ ಎನು
ಯಾರೂ ಬರದಿದರೇನು
ನಮ್ಮ ಬದುಕಿನ ಬವಣೆ ಬದಲಾಗುದೇನು
ಸತ್ತುಹೋದರೆ ಎನು ಅತ್ತು ಕರೆದರೆ ಏನು
ಬಿತ್ತುಣುವದನವನು ಬಿಡುವನೇನು
ಬದುಕ ಹಣತೆಯ ನಾವೆ ಹಚ್ಚವೇನು
ಬಾಳಹಾಯಿಯ ದೋಣಿ
ತೇಲೇ ತೇಲುವದು ಕಾಣಿ
ನಾವು ಹುಟ್ಟಿದ ಮೇಲೆ
ಹುಟ್ಟು ಹಾಕುವುದು ಸಾಲೆ
ನೀನು ನಿಂತರೂ ಕೂಡ
ಬಾಳ ಓಟವು ನಿಲ್ಲದು ನೋಡ
ಎಸ್ಟು ದುಡಿದರು ಏನು
ಅದಕೆ ಮಡಿದರು ಏನು
ಕೈಗೆ ಮೆತ್ತಿದ ಕೆಸರು ಕಂಡಿತೇನು
ಹಸಿರು ಹೊನ್ನಿನ ನಡುವೆ
ಬಿಸಿಯುಸಿರ ಮಡುವೆ
ಬದುಕ ಬಂಡಿಯ ಕೀಲು ಮುರಿಯಿತೇನು
ಕಾಯವ ಮಣಿಸಲು
ಕಾಯಕವ ತಣಿಸಲು
ಸಾಲುಸಾಲಾಗಿ ಸಾಲುಗಳ
ಬರೆದರೂ ಸಾಲಗಳ ಸುಳಿಯಿಂದ
ಹೊರಬರಲು ಕಾಯವಿರುವವರೆಗೆ
ಕಾಯದೇ ಕಾಯಕವ ನೆಡೆಸುತಿಹೆವು
-ಮಂಜುನಾಥ್ ಗಂಡಿ, ಹಗರಿ ಬೊಮ್ಮನ ಹಳ್ಳಿ —–