ಅನುದಿನ‌ ಕವನ-೮೯೧ , ಕವಿ:ಸಿದ್ದು ಜನ್ನೂರು, ಚಾಮರಾಜ ನಗರ ಕವನದ ಶೀರ್ಷಿಕೆ:ಬುದ್ಧನಷ್ಟೆ ಇರುವುದು

ಬುದ್ದನಷ್ಟೆ ಇರುವುದು…

ಆ ಬೆಳಕಿನ
ಸುಧೀರ್ಘ ಧ್ಯಾನ ಬುದ್ದ…

ಓ ಮನವೆ
ನಿನೇಷ್ಟು
ಸುಖೀಭವ ಗೊತ್ತೆ
ಬುದ್ದ ನಿನ್ನೊಳಗೆ ನೆಲೆನಿಂತ ಮೇಲೆ…

ಇಲ್ಲಿ
ಜಾತಿ ಶೋಷಣೆಯು
ಮೇಲುಕೀಳು ಆಚರಣೆಯು
ಯಾವುದು ಗೊಡ್ಡು ಸಂಪ್ರದಾಯಗಳಿಲ್ಲ
ಇರುವುದೊಂದೆ ಬುದ್ದಹೇಳಿದ
ಮಾನವರೆಲ್ಲ ಒಂದೇ ಎಂಬ
ಧಮ್ಮದ ನೀತಿ ತತ್ವ ಪಾಠ…

ಇಲ್ಲಿ ಎಲ್ಲರಿಗೂ ಆಶ್ರಯ ನೀಡುವ
ನೆರಳೊಂದು ಇದೆ
ಅದು ಬುದ್ದ
ಯಾರನ್ನು ಬೇಡುವ ಆಗಿಲ್ಲ
ಬಾಗಿಲಿಂದ ದೂರವೆ ನಿಂತು
ಒಳಗೆ ಬಿಡಿ ಎಂದು ಅಂಗಲಾಚುವಂತಿಲ್ಲ
ಇಲ್ಲಿ ಎಲ್ಲರು ಒಂದೇ
ಸಮತೆಯ ಬುದ್ದನಂಗಡಿಯಲ್ಲಿ
ನಾವೆಲ್ಲರೂ ಒಂದೇ….


-ಸಿದ್ದುಜನ್ನೂರ್, ಚಾಮರಾಜ ನಗರ
*****