ಕಾವ್ಯ ಕಹಳೆ, ಚಿತ್ರ ಕವನ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಕಾತರ….

ಕಾತರ….

ನೀರೆ ನೀ ಯಾರೆ…?
ಅಪ್ಸರೆಯನ್ನೇ ನಾಚಿಸುವ
ನಿರಾಭರಣ ಸುಂದರಿ
ಸುರ ಸುಂದರಿ ||
ತಾಕೀತು ಕೆಟ್ಟವರ ಕಣ್ಣು
ನೀನೀಗ
‌ ಹದಿ ಹರೆಯದ ಹೆಣ್ಣು
ಬಿಳಿಯ ಬಟ್ಟೆಯಲ್ಲಿ
ಮುಚ್ಚಿದ ಮುಖದಲ್ಲಿ ನೋವೇಕೆ ?
ನಿನ್ನ ನಲ್ಲ ಬರಲಿಲ್ಲವೆ!
ಪರದೆಯ ಹಿಂದೆ ಕಣ್ಣೀರ ಧಾರೆ ಏಕೆ !?
ಕಂಗಳಲ್ಲಿ ನಲ್ಲನ ಬರುವಿಕೆಗಾಗಿ
ಬಿಸಿಯುಸಿರ ಕನವರಿಕೆ ||
ಬರುವ….ಬಂದೇ ಬರುವ
ಅವನಿಗೂ ನಿನ್ನ ಅಗಲಿಕೆ
ನಿಲ್ಲದಾಗಿದೆ ಬಿಕ್ಕಳಿಕೆ
ಹೃದಯದೊಳು ಬಿಟ್ಟು ಇರಲಾರದ
ಆಂತರ್ಯದ ತಡಬಡಿಕೆ ||
ಬಂದೇ ಬರುವ ಈ ಹೊತ್ತು
ಮನದ ಭಾವನೆಗಳ ಬಿಚ್ಚಿಡು
ಕಣ್ಣೀರ ಮುಚ್ಚಿಡು
ಎಂದೆಂದಿಗೂ ಕಳಂಕರಹಿತ
ನಿಚ್ಛಳವಾಗಿರು
ಸಂಸಾರದ ಜವಾಬ್ದಾರಿ ಹೊತ್ತು
ಮತ್ತೆ ನಗುತಿರು
ಸದಾ ನಗು ನಗುತಿರು ||

-ಶೋಭಾ ಮಲ್ಕಿ ಒಡೆಯರ್
ಹೂವಿನ ಹಡಗಲಿ