ಮುಸ್ಸಂಜೆ ಹೊತ್ತಲ್ಲಿ
ಸುಮ್ಮನೆ ಬರೆದ ಸಾಲುಗಳೆಲ್ಲಾ
ನಿನ್ನ ಯೌವನದ ಶೃಂಗಾರದ
ವ್ಯಾಕರಣದ ಪದಗಳಾದವಲ್ಲ…!
ಹೆಚ್ಚೇನು ಹೇಳಲಾರೆ ಗೆಳತಿ
ಹುಚ್ಚು ಹಿಡಿಸಿದ ದಿನಗಳಿವು
ಮತ್ತೇಕೆ ಈ ಪ್ರೀತಿಯ ಮತ್ತು….?
ಮುಸ್ಸಂಜೆಯ ಹೊತ್ತಲ್ಲಿ
ರವಿ ಕರಗುವ ಸಮಯದಲ್ಲಿ
ಚಂದಿರನ ಜೊತೆ ಸೇರಿ
ಒಂಚೂರು ದೂರ ನಡೆಯೋಣ ದಿಬ್ಬಣದ ಮಬ್ಬಲ್ಲಿ
ಇನ್ನೇಕೆ ಪಿಸು ಮಾತು
ಈ ತೋಳು ನಿನ್ನ ಮುಗುಳ್ನಗೆಯ ಸ್ವತ್ತು….!
ಕವಿ ಕರೆಯುವ ಸಮಯವಾಯಿತು
ಕತ್ತಲು ಕೈಮಾಡಿ ಕರೆಯುವ ಹೊತ್ತಾಯ್ತು
ಬಾ ಗೆಳತಿ ಒಂಚೂರು ಪ್ರೀತಿ ನಸೆಹೊತ್ತು
ನನ್ನೆದೆಯ ಕನಸು ನಿನಗಷ್ಟೇ ಸೀಮಿತವಾದ ವಸ್ತು….!
ಹೇಗೆ ತೋರ್ಪಡಿಸಲಿ ನನ್ನೆದೆಯ ಪ್ರೀತಿ
ಜಗದ ತುಂಬಾ ಹರಡಿದೆ ಮಲ್ಲಿಗೆಯ ರೀತಿ….!
ಭೋರ್ಗರೆಯದ ಅಲೆಗಳಲ್ಲಿ
ಸಮುದ್ರ ಸೇರದ ನದಿಗಳಲ್ಲಿ
ಬಚ್ಚಿಟ್ಟಿರುವೆ ನನ್ನೆದೆಯ ಪ್ರೀತಿ
ಒಮ್ಮೆ ನೀನು ಬಂದು ಬಿಡು ರವಿ ಕಾಣದಹೊತ್ತಲ್ಲಿ
ಬಚ್ಚಿಟ್ಟ ಈ ನನ್ನ ಪ್ರೀತಿಯ ರಬಸ
ಹರಿಯುವ ನದಿಗಳಿಗಿಂತ ಬಲು ಹಿತ…..!
✍️ಮೂಗಪ್ಪ ಗಾಳೇರ, ಮಂಗಳೂರು, ದಕ್ಷಿಣ ಕನ್ನಡ