ಹತ್ತು ಹಾಯ್ಕುಗಳು
೧.
ಗಿಳಿ ನೆರಳು
ಗಿಡದ ನೆರಳಲ್ಲಿ
ಹೋಯಿತೆಲ್ಲಿಗೆ
೨.
ಹಾರಿದ ಗಿಳಿ
ಮತ್ತೊಮ್ಮೆ ಮರಳಿದೆ
ಬಣ್ಣದ ನೆನಪು
೩.
ಪ್ರತಿಬಿಂಬವು
ಕೆರೆಯಲ್ಲಿ ಮುಳುಗಿ
ಚಂದ್ರನು ಶುಭ್ರ
೪.
ಮರೆಯದಿರು
ಪಿಸುಮಾತ ಪ್ರೀತಿಗೆ
ಉಳಿದ ಮಾತು
೫.
ಭೂಮಿ ಆಕಾಶ
ಹಂಚಿಕೆ ಮಾಡಿದವು
ನಕ್ಷತ್ರಗಳ
೬.
ಹಾಡಿನ ಕೊನೆ
ಹಿಡಿದ ಮಗುವಿಗೆ
ಜಾರಿದ ನಿದ್ರೆ
೭.
ದೀಕ್ಷೆ ತೊಟ್ಟಂತೆ
ಮಗು ತೊಳೆಯುತ್ತಿದೆ
ಗೋಡೆಯ ಚಿತ್ರ
೮.
ಕಳ್ಳನು ಧನ್ಯ
ಆಭರಣದೊಂದಿಗೆ
ಭಯವ ಒಯ್ದ
೯.
ಶಬ್ದ ರಹಿತ
ಈ ಕಾಗದದಲ್ಲಿನ
ಅರ್ಥ ಸಾಧ್ಯವೆ
೧೦.
ಚಂದದ ಚಂದ್ರ
ಬಾಲ್ಯದಲ್ಲಿ ಇನ್ನಷ್ಟು
ಚಂದವಿದ್ದನು
-ಪ್ರಭಾಕರ ಜೋಷಿ, ಸೇಡಂ, ಕಲಬುರಗಿ ಜಿ.
*****