ಹೆಣ್ಣು ಒದ್ದೆಯಾದ ಮಣ್ಣಿನಂತೆ
ಅನೇಕ ಬಾರಿ
ಅನೇಕ ರೂಪಗಳಲ್ಲಿ
ಅವಳು ರೂಪುಗೊಳ್ಳುತ್ತಾಳೆ
ಅವಳ ರೂಪು(ಸ್ಥಾನ) ಎಂದಿಗೂ
ಸ್ಥಾಯಿಯಾಗಿರುವುದಿಲ್ಲ
ಬದಲಾಗುತ್ತಲೇ ಇರುತ್ತದೆ
ಬದುಕೆಂಬ ಬಿಸಿಲು,
ಬೆಂಕಿಯಲ್ಲಿ ಬೆಂದು
ಮೂರ್ತಿಗಳ ರೂಪದಲ್ಲಿ
ಹೊರ ಬರುತ್ತಾಳೆ
ಕೆಲವೊಮ್ಮೆ ಕಿವಿ ಇರುವುದಿಲ್ಲ
ಕೆಲವೊಮ್ಮೆ ಬಾಯಿಲ್ಲ
ಒಂದೊಮ್ಮೆ ಇದ್ದರೂ
ದುರುಗುಟ್ಟಿ ನೋಡುವ
ಕಣ್ಣುಗಳ ಮುಂದೆ
ಮೌನಿಯಾಗುತ್ತಾಳೆ
-ವಂದನಾ ಪರಾಶರ್
ಅನು: ಮಂಜುಳ ಕಿರುಗಾವಲು
*****