ಎಸ್.ಬಿ.ಐ: 37 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಬ್ಲಡ್ ದೇವಣ್ಣರಿಗೆ ಗೌರವ ಬೀಳ್ಕೊಡುಗೆ

ಬಳ್ಳಾರಿ : ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಕಳೆದ 37 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ರಕ್ತದಾನಿ ಬ್ಲಡ್ ದೇವಣ್ಣ ಅವರನ್ನು ಗೌರವದಿಂದ ಬೀಳ್ಕೋಡಲಾಯಿತು.

ಬ್ಯಾಂಕ್‌ನ ಬುಸಿನೆಸ್ ಶಾಖೆಯಲ್ಲಿ ಸರಳವಾಗಿ ಜರುಗಿದ  ಕಾರ್ಯಕ್ರಮದಲ್ಲಿ  ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು ಗೌರವ ಪೂರ್ವಕವಾಗಿ ಬಿಳ್ಕೊಟ್ಟರು.

ಮೆಸೆಂಜರ್ ಆಗಿ ಸಹಾಯಕರಾಗಿ, ಹಿರಿಯ ಸಹಾಯಕರಾಗಿ, ಮತ್ತು ವಿಶೇಷ ಸಹಾಯಕರಾಗಿ ರಾಜ್ಯದ ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟ ಬ್ರಾಂಚ್, ಬಳ್ಳಾರಿ ಸ್ಟೇಷನ್ ರೋಡ್ ಬ್ರಾಂಚ್, ತುಮಕೂರು ಜಿಲ್ಲೆಯ ವದನಕಲ್ಲು ಬ್ರಾಂಚ್, ಸಿರುಗುಪ್ಪ ತಾಲೂಕಿನ ಸಿರಿಗೇರಿ ಬ್ರಾಂಚ್, ಬಳ್ಳಾರಿ ಮುಖ್ಯ ಶಾಖೆ ಮತ್ತು ಗೌರ‍್ನಮೆಂಟ್ ಬಿಸಿನೆಸ್ ಬ್ರಾಂಚ್ಬ ಗಳಲ್ಲಿ  ಸತತ 37 ವರ್ಷಗಳಿಂದ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸಿ ಜೂ. 30ರಂದು ಬ್ಲಡ್ ದೇವಣ್ಣ ಅವರು ವಯೋ‌ನಿವೃತ್ತಿ ಹೊಂದಿದರು.

ಈ  ಸಂದರ್ಭದಲ್ಲಿ ತಮ್ಮ ಸುಧೀರ್ಘ ಸೇವೆಯನ್ನು ಮೆಲುಕು ಹಾಕಿದ ಬ್ಲಡ್ ದೇವಣ್ಣ ಅವರು, ನನ್ನ ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳು ನನಗೆ ನೀಡಿದ ಸಹಕಾರಿಂದ ಇಷ್ಟು ವರ್ಷ ಬ್ಯಾಂಕ್ ನಲ್ಲಿ  ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಯಿತು ಎಂದು ತಿಳಿಸಿದರು.  ಬ್ಯಾಂಕ್‌ನ ಸಹಾಯಕ ಪ್ರಬಂಧಕ ವ್ಯವಸ್ಥಾಪಕ ಚಂದ್ರಶೆಖರ ರೆಡ್ಡಿ ಮಾತನಾಡಿ,  108 ಬಾರಿ ರಕ್ತದಾನ ಮಾಡಿ ಬ್ಲಡ್ ದೇವಣ್ಣ ಎಂದೇ ಹೆಸರಾದ ಇವರು ನಮ್ಮ ಬ್ಯಾಂಕ್‌ನಲ್ಲಿ ಕೆಲಸ ಮಾಡಿರುವುದು ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  ಇವರ ಸೇವಾವಧಿಯಲ್ಲಿ  ಒಂದು ಕಪ್ಪು ಚುಕ್ಕೆಯಿಲ್ಲದೆ ಕಾರ್ಯನಿರ್ವಹಿಸಿ ಒಳ್ಳೆಯ ಹೆಸರನ್ನು ಪಡೆದುಕೊಂಡಿದ್ದಾರೆ. ಇವರನ್ನು ಇಂದು ಬಿಳ್ಕೊಡಲು ನಮಗೆ ಮನಸ್ಸಾಗುತ್ತಿಲ್ಲ ಎಂದರು.                                ಕಾರ್ಯಕ್ರಮದಲ್ಲಿ ಚೀಫ್ ಮ್ಯಾನೇಜರ್ ವರಕುಮಾರ್, ಜಿ.ಬಿ.ಬ್ರಾಂಚ್ ಮ್ಯಾನೇಜರ್ ರವಿಕಾಂತ್ ಗೌರವ್, ಡಿ.ಜಿ.ಎಸ್ ರಾಮಕೃಷ್ಣ ದೇವರ್, ಧರ್ಮೇಂದರ್, ಹುಲುಗಪ್ಪ, ತಾಯಪ್ಪ, ಮಾಜಿ ಎಂಫ್ಲಾಯ್ ಬಿ ರಾಮುಡು, ಕೆ ಜಗಧೀಶ್, ಎಲ್.ಐ.ಸಿ ರಾಮು, ಎಲ್.ಐ.ಸಿ ಗೋಪಾಲ್ ಸೇರಿದಂತೆ ಜಿ.ಬಿ ಬ್ರಾಂಚ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕೊನೆಯಲ್ಲಿ ಬ್ಲಡ್ ದೇವಣ್ಣ ದಂಪತಿಗಳನ್ನು ಸನ್ಮಾನಿಸಿ ಗೌರಿಸಲಾಯಿತು.